ನ್ಯೂಯಾರ್ಕ್: ಕ್ಯಾಲಿಫೋರ್ನಿಯಾದ ಯೊಸೆಮೈಟ್ ನ್ಯಾಷನಲ್ ಪಾರ್ಕ್‍ನಲ್ಲಿ 800 ಅಡಿ ಎತ್ತರದಿಂದ ಬಿದ್ದು ಭಾರತೀಯ ಮೂಲದ ದಂಪತಿ ಸಾವನ್ನಪ್ಪಿದ್ದು, ವಿಷ್ಣು ವಿಶ್ವನಾಥ್ (29) ಮತ್ತು ಮೀನಾಕ್ಷಿ ಮೂರ್ತಿ (30) ಎಂಬ ದಂಪತಿ ಅಮೇರಿಕಾದ ನ್ಯೂಯಾರ್ಕ್ ನಲ್ಲಿ ವಾಸವಿದ್ದರು. ಇತ್ತೀಚೆಗಷ್ಟೇ ಸ್ಯಾನ್ ಜೋಸ್ ನ ಸಿಸ್ಕೋ ಕಂಪನಿಯಲ್ಲಿ ಸಿಸ್ಟಂ ಇಂಜಿನಿಯರ್ ಆಗಿ ವಿಷ್ಣು ವಿಶ್ವನಾಥ್ ಗೆ ಕೆಲಸ ಸಿಕ್ಕಿದ್ದರಿಂದ ದಂಪತಿ ಕ್ಯಾಲಿಫೋರ್ನಿಯಾಗೆ ತೆರಳಿದ್ದರು ಎನ್ನಲಾಗಿದ್ದು, ಯೊಸೆಮೈಟ್ ನ್ಯಾಷನಲ್ ಪಾರ್ಕ್‍ನ ಬೆಟ್ಟದ ತುದಿಯಿಂದ ಬಿದ್ದು ಮೃತಪಟ್ಟಿದ್ದು, ಅವರನ್ನು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ದಂಪತಿ ಎಂದು ಗುರುತಿಸಲಾಗಿದೆ.