BMTC ಕಂಡಕ್ಟರ್‌ಗೆ ಚಾಕುವಿನಿಂದ ಇರಿದ ಪ್ರಯಾಣಿಕ.

33

ಬೆಂಗಳೂರು: ಪ್ರಯಾಣಿಕನೋರ್ವ ಬಿಎಂಟಿಸಿ ಬಸ್ ಕಂಡಕ್ಟರ್ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ವೈಟ್‍ಫೀಲ್ಡ್ ಬಳಿಯ ITPL ಬಸ್ ಸ್ಟಾಪ್ ಬಳಿ ನಡೆದಿದೆ. ನಿನ್ನೆ ಸಂಜೆ ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ಸ್ಟಾಪ್ ನಲ್ಲಿ KA-57-F0015 ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್‍ಗೆ ಅಪರಿಚಿತ ವ್ಯಕ್ತಿ ಎರಡ್ಮೂರು ಬಾರಿ ಚಾಕುವಿನಿಂದ ಇರಿದಿದ್ದಾನೆ. ಪ್ರಯಾಣಿಕರು ತುಂಬಿದ್ದ ಬಸ್ ನಲ್ಲಿ ಈ ದುಷ್ಕೃತ್ಯ ನಡೆದಿದೆ. ಕಂಡಕ್ಟರ್ ಯೋಗೇಶ್‍ಗೆ ಎರಡ್ಮೂರು ಬಾರಿ ಚಾಕುವಿನಿಂದ ಇರಿದ ಬಳಿಕ ಬಸ್‍ನಲ್ಲಿದ್ದ ಸುತ್ತಿಗೆ ತೆಗೆದುಕೊಂಡು ಗಾಜು ಪುಡಿಗಟ್ಟಿ ಹುಚ್ಚನಂತೆ ವರ್ತಿಸಿದ್ದಾನೆ. ಇದನ್ನು ನೋಡಿ ಸಹ ಪ್ರಯಾಣಿಕರು ಕಿರುಚಾಡಿಕೊಂಡು ಬಸ್ ನಿಂದ ಕೆಳಗೆ ಇಳಿದು ಓಡಿ ಹೋಗಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವೈಟ್‍ಫೀಲ್ಡ್ ಠಾಣೆ ಪೊಲೀಸರು, ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಇನ್ನು ಚಾಕು ಇರಿತಕ್ಕೆ ಒಳಗಾಗಿರುವ ಕಂಡಕ್ಟರ್ ಯೋಗೇಶ್ ಅವರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಚಾಕು ಇರಿದ ಪ್ರಯಾಣಿಕ ಇಂದು ಬೆಳಿಗ್ಗೆ ಖಾಸಗಿ ಕಂಪನಿಗೆ ಇಂಟರ್ವಿವ್ ಗೆ ಹೋಗಿದ್ದನಂತೆ. ಈ ವೇಳೆ ಆತನಿಗೆ ಕೆಲಸ ಸಿಕ್ಕಿಲ್ಲವಂತೆ. ಅದಕ್ಕಾಗಿ ನಾನು ಹೊರಗೆ ಇರುವುದಿಲ್ಲ. ಜೈಲಿಗೆ ಹೋಗ್ತಿನಿ ಎಂದು ಈ ರೀತಿ ಮಾಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದ್ರೆ, ಆ ವ್ಯಕ್ತಿ ಯಾರು? ಎಲ್ಲಿಯವರು ಎನ್ನುವ ಮಾಹಿತಿ ಸಿಕ್ಕಿಲ್ಲ.