ಮೂಡಿಗೆರೆ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗದ ಹಿನ್ನೆಲೆ ಸದನದಲ್ಲಿ ಗಮನ ಸೆಳೆದ: ಶಾಸಕ :ಎಂ.ಪಿ.ಕುಮಾರಸ್ವಾಮಿ.
https://youtu.be/jkngZyCPCTI
ಬೆಂಗಳೂರು : ಕಳೆದ ಎರಡು ವರ್ಷಗಳಿಂದ ಸುರಿದ ರಣಭೀಕರ ಮಳೆಯಿಂದಾಗಿ, ಹಳ್ಳಿ ಸೇರಿದಂತೆ ಮುಖ್ಯರಸ್ತೆಗಳು, ದುರಸ್ಥಿಯಾಗಿರುವ ರಸ್ತೆಗಳನ್ನು ರಿಪೇರಿ ಮಾಡದ ಕಾರಣ ಕ್ಷೇತ್ರದಲ್ಲಿ ಜನರಿಗೆ ಮುಖ ತೋರಿಸಲು ಆಗದಂತಹ ಪರಿಸ್ಥಿತಿ ಬಂದಿದೆ ಎಂದು...
ಮಂಗಳೂರು : ಉಳ್ಳಾಲ ನರ್ಸಿಂಗ್ ಕಾಲೇಜಿನ 40 ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆ, ಕಾಲೇಜು ಸೀಲ್ ಡೌನ್…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಉಳ್ಳಾಲದ ಖಾಸಗಿ ನರ್ಸಿಂಗ್ ಕಾಲೇಜಿನ 40 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಫೆಬ್ರವರಿ 19ರವರೆಗೆ ಸೀಲ್ ಡೌನ್ ಮಾಡಲಾಗಿದೆ.
ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುವವರ ಪೈಕಿ...
ಮಂಗಳೂರು:ಕರ್ತವ್ಯದ ವೇಳೆಯಲ್ಲೇ ಸಿಸಿಬಿ ಪೊಲೀಸರ ಎಣ್ಣೆಪಾರ್ಟಿ, ತನಿಖೆಗೆ ಆದೇಶ ನೀಡಿದ ನಗರ ಕಮೀಷನರ್.
ಮಂಗಳೂರು: ಕರ್ತವ್ಯದ ಸಮಯದಲ್ಲಿ ಬಾರಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಎಣ್ಣೆ ಪಾರ್ಟಿ ನಡೆಸಿದ ವಿಡಿಯೋ ಇದೀಗ ವೈರಲ್ ಆಗಿದ್ದು, ಸಿಸಿಬಿ ಘಟಕ 8 ಸಿಬ್ಬಂದಿಯವರ ಮೇಲೆ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್...
ಬೆಂಗಳೂರು: ಸಿಸಿಬಿ ಮಿಂಚಿನ ಕಾರ್ಯಾಚರಣೆ, ಮಾದಕವಸ್ತು ಮಾರುತ್ತಿದ್ದ ನಾಲ್ವರು ಬಂಧನ.
ಬೆಂಗಳೂರು: ನಗರದಲ್ಲಿ ಮತ್ತೆ ಡ್ರಗ್ಸ್ ಪೆಡ್ಲರ್ಗಳ ಹಾವಳಿ ಹೆಚ್ಚಾಗಿದ್ದು, ಇಂದು ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಕೈಗೊಂಡ ಸಿಸಿಬಿ, ಮಾದಕವಸ್ತು ಮಾರುತ್ತಿದ್ದ ಇಬ್ಬರು ನೈಜೀರಿಯನ್ ಪ್ರಜೆಗಳು ಹಾಗೂ ಮತ್ತಿಬ್ಬರು ಅಂತರ್ ರಾಜ್ಯ...
ಬ್ಯಾಂಕಿಂಗ್ ಸೇವೆಗಳಿಗೆ ನೆರವಾಗುವ ‘ಮಾಯಾ’ ರೋಬೋಟ್ ತಯಾರಿಸಿದ ಹುಬ್ಬಳ್ಳಿಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು…
ಹುಬ್ಬಳ್ಳಿ: ಬ್ಯಾಂಕಿಂಗ್ ಕೆಲಸಗಳಿಗೆ ಸಹಾಯವಾಗಲೆಂಬ ಉದ್ದೇಶದಿಂದ 'ಮಾಯಾ' ಎಂಬ ರೋಬೋಟ್ ಅನ್ನು ಹುಬ್ಬಳ್ಳಿಯ ಇಂಜಿನಿಯರಿಂಗ್ ಕಾಲೇಜಿನ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾನಿಲಯದ ಆಟೊಮೇಷನ್ ಮತ್ತು ರೊಬೊಟಿಕ್ಸ್ ವಿಭಾಗದ ವಿದ್ಯಾರ್ಥಿಗಳು ಅನ್ವೇಷಿಸಿದ್ದಾರೆ. ಸಂಶೋಧನಾ ಸಹಾಯಕರಾದ ಅಭಿಜಿತ್...
ಬೆಂಗಳೂರು : ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮೇ.24 ರಿಂದ ಜೂನ್ 10ರವರೆಗೆ ಪರೀಕ್ಷೆ.
ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮೇ.24 ರಿಂದ ಜೂನ್ 10ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ಮೇ.24ರಂದು ಭೌತಶಾಸ್ತ್ರ ಮತ್ತು ಇತಿಹಾಸ, ಮೇ 25ರಂದು ಮೈನಾರಿಟಿ...
ತುಮಕೂರು: ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡಿದ್ದ ವ್ಯಕ್ತಿಯ ಬಂಧನ…
ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಪಟ್ಟಣದಲ್ಲಿ ಬೇಕಾಬಿಟ್ಟಿಯಾಗಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಾಹನವನ್ನು ಸೀಜ್ ಮಾಡಿದ್ದಾರೆ. ಸಾಹಸಮಯವಾಗಿ ಬೈಕ್ ಚಾಲನೆ ಮಾಡುವ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆ...
ಮೃತ ಮಹಿಳೆಯ ಖಾತೆಯಿಂದ 19 ಸಾವಿರ ರೂ. ಹಣ ಎಗರಿಸಿದ ಅಂಚೆ ಕಚೇರಿಯ ಅಧಿಕಾರಿಗಳು!
ಮಂಡ್ಯ: ಹತ್ತು ವರ್ಷಗಳ ಹಿಂದೆಯೇ ಮೃತಪಟ್ಟಿದ್ದ ವಿಜಯಾಂಬ ಅವರ ಹೆಸರಲ್ಲಿ ಅಂಚೆ ಕಚೇರಿಯ ಖಾತೆಯೊಂದರಲ್ಲಿದ್ದ 19 ಸಾವಿರ ರೂ. ಹಣ ಎಗರಿಸಿರುವ ಘಟನೆ ಮಂಡ್ಯ ಜಿಲ್ಲೆ ಕೆರಗೊಡು ಗ್ರಾಮದ ಅಂಚೆ ಕಚೇರಿಯಲ್ಲಿ ನಡೆದಿದೆ....
ಬೆಂಗಳೂರು: 2020-21ನೇ ಸಾಲಿನ ಎಸ್‌ಎಸ್ ಎಲ್ ಸಿ ಪರೀಕ್ಷೆ ಜೂನ್ 14 ರಿಂದ ಆರಂಭ
ಬೆಂಗಳೂರು: 2020-21ನೇ ಸಾಲಿನ ಎಸ್‌ಎಸ್ ಎಲ್ ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಘೋಷಣೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜೂನ್ 14ರಿಂದ ಎಸ್‌ಎಸ್‌ಎಲ್ ಸಿ...
ಆನೆ ತುಳಿತಕ್ಕೆ ಓರ್ವ ವ್ಯಕ್ತಿ ಬಲಿ…
ಅರಕಲಗೂಡು (ಹಾಸನ): ಸೋಮವಾರಪೇಟೆಯಿಂದ ಸಂತೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಆನೆಯೊಂದು ದಾಳಿ ಮಾಡಿರುವ ಘಟನೆ ಅರಕಲಗೂಡು ತಾಲ್ಲೂಕಿನಲ್ಲಿ ನಡೆದಿದೆ. ಮೃತ ಪಟ್ಟಿರುವ ವ್ಯಕ್ತಿ ರೇವಣ್ಣ (40) ಚಿಕ್ಕ ಬೊಮ್ಮನಹಳ್ಳಿ ಗ್ರಾಮದವನೆಂದು...












