ಚಿಕ್ಕಮಗಳೂರು : ಕನ್ನಡ ಸಾವಿರಾರು ವರ್ಷಗಳ ಇತಿಹಾಸವಿರುವ ಅತ್ಯಂತ ಶ್ರೀಮಂತ ಭಾಷೆ : ಹಿರಿಗಯ್ಯ.

172
firstsuddi

ಚಿಕ್ಕಮಗಳೂರು : ಕನ್ನಡಿಗರು ಮಾತೃಭಾಷೆಯನ್ನು ಜತನದಿಂದ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ ಸಲಹೆ ಮಾಡಿದರು.
ಜಿಲ್ಲಾ ಕಸಾಪ ಇಲ್ಲಿನ ಜಯನಗರದ ಸಾರ್ವಜನಿಕ ಬಾಲಕರ ವಿಧ್ಯಾರ್ಥಿ ನಿಲಯದಲ್ಲಿ ಗುರುವಾರ ಏರ್ಪಡಿಸಿದ್ದ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ ಮತ್ತು ಲೀಲಮ್ಮ ಲೋಕಪ್ಪಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾವಿರಾರು ವರ್ಷಗಳ ಇತಿಹಾಸವಿರುವ ಅತ್ಯಂತ ಶ್ರೀಮಂತ ಭಾಷೆ, ಅನೇಕ ಕಲಾವಿದರು, ಸಾಹಿತಿಗಳು, ಕವಿಗಳು ಅದನ್ನು ಉಳಿಸಿ ಬೆಳೆಸಿದ್ದಾರೆ, ಕನ್ನಡವೇ ನಮ್ಮ ಉಸಿರು, ಅದು ನಾಶವಾದರೆ ನಮ್ಮ ಸಂಸ್ಕೃತಿ ನಾಶವಾಗುತ್ತದೆ ಆಗ ನಾವು ನಮ್ಮತನ ಕಳೆದುಕೊಂಡು ಜಗತ್ತಿನೆದುರು ಒಂಟಿಯಾಗಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ಬೆಂಗಳೂರಿನಲ್ಲಿ ಶೇ.90 ರಷ್ಟಿದ್ದ ಕನ್ನಡಿಗರು ಇಂದು ಶೇ.30ರಷ್ಟಿದ್ದಾರೆ, ರಾಜದಾನಿಯಲ್ಲೇ ಕನ್ನಡ ಕಣ್ಮರೆಯಾಗುತ್ತಿದೆ. ಎಂದು ವಿಷಾದಿಸಿದ ಅವರು ಕನ್ನಡಿಗರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಪರಿಸ್ಥಿತಿ ಕೈ ಮೀರುವ ಮುನ್ನ ನಾಡಿನ ನೆಲ. ಜಲ. ಮತ್ತು ಬಾಷೆಯ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಧರ್ಮ ಮತ್ತು ಸಂಸ್ಕೃತಿ ಬೆಳವಣಿಗೆಯಲ್ಲಿ ಸಾಹಿತ್ಯದ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿದ ಸಾಹಿತಿ ಬಿ.ತಿಪ್ಪೇರುದ್ರಪ್ಪ ಸಂಸ್ಕ್ರತಿ ಎಂದರೆ ಬಾಷೆ, ಅದು ಉಳಿದರೆ ಸಾಹಿತ್ಯ ಸಂಸ್ಕ್ರತಿ ಉಳಿಯುತ್ತದೆ. ಎಂದರು
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ವಿದ್ಯಾರ್ಥಿಗಳು ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ಆಳವಡಿಸಿಕೊಂಡರೆ ಉತ್ತಮ ಮನ್ಯುಷರಾಗಬಹುದು ಎಂದು ಹೇಳಿದರು
ಐಡಿಎಸ್‍ಜಿ ಕಾಲೇಜಿನ ಪ್ರಾಧ್ಯಾಪಕ ಡಾ// ಹೆಚ್ ಎಮ್ ಮಹೇಶ್ ಸಂಸ್ಕಾರ ರೂಪಿಸುವಲ್ಲಿ ಸಾಹಿತ್ಯದ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿದರು
ಉದ್ಯಮಿ ವೈ.ಕೆ ರಾಜಾನಾಯ್ಕ್, ನ್ಯಾಯವಾದಿ ವಿಶ್ವನಾಥ್, ವಿದ್ಯಾರ್ಥಿನಿಲಯದ ಪಾಲಕ ಪ್ರಶಾಂತ್ ಉಪಸ್ಥಿತರಿದ್ದರು
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ. ಮಂಜುನಾಥಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು, ಸಂಘಟನಾ ಕಾರ್ಯದರ್ಶಿ ಚಂದ್ರಯ್ಯ ಸ್ವಾಗತಿಸಿದರು, ವಿದ್ಯಾರ್ಥಿನಿಲಯದ ಹಿರಿಯ ಪಾಲಕ ಕುಮಾರಸ್ವಾಮಿ ವಂದಿಸಿದರು.