ಚಿಕ್ಕಮಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ, ನಗರದಲ್ಲಿ ಇರುವ ನಿರ್ಗತಿಕರು ಮತ್ತು ಭಿಕ್ಷುಕರನ್ನು ಜಿಲ್ಲಾಡಳಿತ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದು, ಎಐಟಿ ಸಮೀಪದ ಮೊರಾರ್ಜಿ ಶಾಲೆಯ ಕಟ್ಟಡಕ್ಕೆ ಕರೆದೊಯ್ದಿದ್ದು, ಅಲ್ಲಿಯೇ ಅವರಿಗೆ ಊಟ-ಉಪಾಹಾರಗಳ ವ್ಯವಸ್ಥೆ ಮಾಡಲಾಗಿದ್ದು, ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿದ್ದು, ಅದರಂತೆ ಚಿಕ್ಕಮಗಳೂರು ನಗರವೂ ಕೂಡಾ ಲಾಕ್‍ಡೌನ್ ಆಗಿದ್ದು, ಇದರಿಂದ ಬೀದಿಬದಿಯಲ್ಲಿ ವಾಸವಿದ್ದ ಭಿಕ್ಷುಕರು ಹಾಗೂ ನಿರ್ಗತಿಕರ ರಕ್ಷಣೆಗೆ ಚಿಕ್ಕಮಗಳೂರು ಯುವ ಜನತಾದಳ ಮುಂದಾಗಿದ್ದು, ಪ್ರತಿದಿನ ನಗರದ ಮೂಲೆ ಮೂಲೆಗೆ ಸಂಚರಿಸಿ ನಿರ್ಗತಿಕರಿಗೆ ಊಟ-ಉಪಾಹಾರ ನೀಡುತ್ತಿದ್ದಾರೆ.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಯುವ ಜನತಾದಳದ ಜಿಲ್ಲಾಧ್ಯಕ್ಷ ವಿನಯ್ ರಾಜ್ ಅವರು, ಕೊರೊನಾ ವೈರಸ್ ದೇಶವ್ಯಾಪ್ತಿ ಹರಡುತ್ತಿದ್ದು, ಇದರಿಂದ 21 ದಿನಗಳ ಕಾಲ ಲಾಕ್‍ಡೌನ್ ಮಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆದೇಶ ಹೊರಡಿಸಿದ್ದು, ಇದರಿಂದ ಅಂಗಡಿ ಮುಂಗಟ್ಟುಗಳು, ಹೋಟೆಲ್, ರೆಸ್ಟೋರೆಂಟ್, ಸಾರಿಗೆ ಸೇರಿದಂತೆ ಎಲ್ಲವೂ ಸ್ಥಗಿತವಾಗಿದ್ದು, ಬೀದಿಬದಿ ವಾಸವಿದ್ದ ನಿರ್ಗತಿಕರು ಹಾಗೂ ಭಿಕ್ಷುಕರ ಸ್ಥಿತಿ ಕಷ್ಟಕರವಾಗಿದ್ದು, ನಮ್ಮ 15 ಜನ ಯುವಕರ ತಂಡ ಹಸಿದವರಿಗೆ ಊಟ-ಉಪಾಹಾರ ನೀಡುತ್ತಿದ್ದೇವೆ ಎಂದರು.










