“ಕಾಮಿಡಿ ಕಿಲಾಡಿಗಳು ಸೀಸನ್-3”ರ ವಿನ್ನರ್ ಪಟ್ಟ ಗಿಟ್ಟಿಸಿಕೊಂಡ ಉಡುಪಿಯ ರಾಕೇಶ್…

298
firstsuddi

ಬೆಂಗಳೂರು : ಕನ್ನಡದ ರಿಯಾಲಿಟಿ ಶೋ “ಕಾಮಿಡಿ ಕಿಲಾಡಿಗಳು ಸೀಸನ್-3” ಮುಕ್ತಾಯವಾಗಿದ್ದು, ಉಡುಪಿಯ ರಾಕೇಶ್ ಅವರು ಕಾಮಿಡಿ ಕಿಲಾಡಿಗಳು-3 ವಿನ್ನರ್ ಆಗಿ ಹೊರಹೊಮ್ಮಿದ್ದು, ಹಾಸನದ ಸಂತೋಷ್ ಅವರು ರನ್ನರ್ ಅಪ್ ಆಗಿದ್ದಾರೆ. ಇತ್ತ ಮನೋಹರ್ ಹಾಗೂ ದಾನಪ್ಪ ಅವರು ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜೀ ಕನ್ನಡ ವತಿಯಿಂದ ವಿನ್ನರ್ ರಾಕೇಶ್ ಅವರಿಗೆ 8ಲಕ್ಷ ರೂ ಹಾಗೂ ರನ್ನರ್ ಅಪ್ ಸಂತೋಷ್ ಅವರಿಗೆ 4ಲಕ್ಷ ರೂ ನಗದು ಬಹುಮಾನ ಹಾಗೂ ಟ್ರೋಫಿಯನ್ನು ನೀಡಲಾಯಿತು. ಹಾಗೂ ಎರಡನೇ ರನ್ನರ್ ಅಪ್ ಮನೋಹರ್ ಹಾಗೂ ದಾನಪ್ಪ ಇಬ್ಬರಿಗೂ ಸೇರಿ 2 ಲಕ್ಷರೂ ನಗದು ಬಹುಮಾನ ಟ್ರೋಫಿಯನ್ನು ನೀಡಿ ಅಭಿನಂದಿಸಲಾಯಿತು.
ಅಲ್ಲದೇ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ ದಾನಪ್ಪ ಅವರು ಸರಿಗಮಪ ಸ್ಪರ್ಧಿಗಳಾದ ಅಂಧ ಸಹೋದರಿಯರಾದ ರತ್ನಮ್ಮ ಹಾಗೂ ಮಂಜಮ್ಮ ಅವರಿಗೆ ತಮಗೆ ಶೋನಲ್ಲಿ ದೊರೆತ ನಗದು ಬಹುಮಾನದಲ್ಲಿ 10 ಸಾವಿರ ಹಣವನ್ನು ನೀಡುವುದಾಗಿ ಫಿನಾಲೆ ವೇದಿಕೆಯಲ್ಲಿ ಘೋಷಿಸಿದ್ದು, ದಾನಪ್ಪ ಅವರು ಅಂಧ ಸಹೋದರಿಯರ ನೆರವಿಗೆ ನಿಂತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.