ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಟ್ವಿಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, ಟ್ರಾಯ್ ರೂಪಿಸಿದ ಹೊಸ ದರ ಪಟ್ಟಿ ಗ್ರಾಹಕರು, ಕೇಬಲ್ ಆಪರೇಟರ್ಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಿಸಿದೆ. 300ರಿಂದ 350 ಪಾವತಿಸಿ 400ರಿಂದ 450 ಚಾನಲ್ ವೀಕ್ಷಿಸುತ್ತಿದ್ದ ಗ್ರಾಹಕರು ಅದೇ ಮೊತ್ತಕ್ಕೆ 150 ಚಾನಲ್ ನೋಡುವಂತಾಗಿದೆ ಮೋದಿ ಸರ್ಕಾರ ಕಾರ್ಪೊರೇಟ್ ಕುಳಗಳ ಹಿತಕಾಯಲು ಮಾತ್ರವೇ ಇಂತ ಅವೈಜ್ಞಾನಿಕ ನೀತಿ ಜಾರಿಗೊಳಿಸುತ್ತಿದೆ.
ಮೋದಿ ಸರ್ಕಾರ ರೈತರಿಗೆ 6000 ನೀಡಲು ನರೇಗಾ ಯೋಜನೆಯ 24,000 ಕೋಟಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಈ ವರೆಗೂ ನರೇಗಾ ಕೂಲಿ ಹಣ ಬಿಡುಗಡೆ ಮಾಡಿಲ್ಲ. 5 ವರ್ಷ ರೈತರ ಸಾಲಮನ್ನಾ ಮಾಡದ ಮೋದಿಯವರು ಇದೀಗ ನರೇಗಾ ಕಾರ್ಮಿಕರಿಗೆ ತೊಂದರೆ ನೀಡುತ್ತಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆಗೆ ಕರ್ನಾಟಕ ಸರ್ಕಾರ ಸಹಕರಿಸುತ್ತಿಲ್ಲ ಎಂಬ ಪ್ರಧಾನಿ ಮೋದಿಯವರ ಆರೋಪ ಶುದ್ದ ಸುಳ್ಳು ರಾಜ್ಯ ಕೇಂದ್ರಕ್ಕೆ 2.8ಲಕ್ಷ ರೈತರ ಮಾಹಿತಿ ನೀಡಿದ್ದರೂ ಕೇವಲ 17 ರೈತರಿಗೆ ಯೋಜನೆ ತಲುಪಿದೆ 6 ರೈತರಿಗಷ್ಟೇ ಹಣ ಬಂದಿದ್ದು 2000 ಬದಲು ಕೇವಲ 950 ಮಾತ್ರವೇ ಬಂದಿದೆ ಚುನಾವಣೆಗಾಗಿ ಬಿಜೆಪಿ ಮಾಡಲೆತ್ನಿಸಿದ ನಾಟಕ ಬಯಲಾಗಿದೆ.
ರಫೇಲ್ ಹಗರಣದಲ್ಲಿ 30000 ಕೋಟಿ ಲೂಟಿ ಮಾಡಿ, ತನಿಖೆಗೆ ಒಪ್ಪಿಸದೆ ದೇಶದ ಜನತೆಗೆ ವಂಚನೆ ಮಾಡಿ, ಸಂಸತ್ತಿಗೆ ವಂಚನೆ ಮಾಡಿ ಈಗ ಸುಪ್ರೀಂ ಕೋರ್ಟಿಗೂ ವಂಚನೆ ಮಾಡುತ್ತಿರುವುದು ಯಾರು? ಕಣ್ಣಾ ಮುಚ್ಚಾಲೆ ಆಟ; ರಫೇಲ್ ಕಡತಗಳು ಕಳುವಾಗಿಲ್ಲವಂತೆ. ದೇಶಕ್ಕೇ ಗೊತ್ತು ಕಾವಲುಗಾರನೇ ಕಳ್ಳ ಎಂದು ಕರ್ನಾಟಕ ಕಾಂಗ್ರೆಸ್ ಟ್ವಿಟ್ ಮಾಡಿದೆ.










