ಬೆಂಗಳೂರು: ಕಬ್ಬು ಬಾಕಿ ಪಾವತಿ, ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ . 25 ಸಾವಿರ ರೈತರು ಬೆಂಗಳೂರಿಗೆ ಬರುವ ಸಾಧ್ಯತೆ ಇದ್ದು,ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ರೈತರು ಆಗಮಿಸಲಿದ್ದಾರೆ, ಈ ಹೋರಾಟಕ್ಕೆ ರಾಜ್ಯ ರೈತಸಂಘ , ಹಸಿರು ಸೇನೆ ಬೆಂಬಲ ಸೂಚಿಸಿದೆ. ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ರೈತರೆಲ್ಲರೂ ಫ್ರೀಡಂ ಪಾರ್ಕಿಗೆ ಬರಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಫ್ರೀಡಂ ಪಾರ್ಕ್ ಬಳಿ ರೈತರನ್ನು ತಡೆಯಲು ಭದ್ರತೆಯ ದೃಷ್ಟಿಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.










