ಕೊಟ್ಟಿಗೆಹಾರ : ಬಿಜೆಪಿಯಲ್ಲಿ ಕಾರ್ಯಕರ್ತರೆ ನಾಯಕರಾಗಿದ್ದು ಪಕ್ಷ ಈ ಮಟ್ಟಿಗೆ ಬೆಳೆಯಲು ಕಾರ್ಯಕರ್ತರೆ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಹೇಳಿದರು.
ಬಾಳೂರು ಹೋಬಳಿಯ ನಿಡುವಾಳೆಯಲ್ಲಿ ನಡೆದ ಬಿಜೆಪಿ ಹೋಬಳಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸದೃಡ ಭಾರತ ನಿರ್ಮಾಣ ಮೋದಿ ಅವರ ಸರ್ಕಾರದ ಗುರಿಯಾಗಿದೆ. ಮೋದಿ ಅವರ ನಾಯಕತ್ವದಲ್ಲಿ ಭಾರತ ನಂ1 ಸ್ಥಾನಕ್ಕೆ ತಲುಪಲಿದೆ. ಪಕ್ಷದಲ್ಲಿ ತ್ಯಾಗ, ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಬಿಜೆಪಿಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪಕ್ಷದ ಏಳಿಗೆಗೆ, ದೇಶದ ಸದೃಡತೆಗೆ ದುಡಿದರೆ ಅವಕಾಶಗಳು ಹುಡುಕಿಕೊಂಡು ಬರುತ್ತದೆ ಎಂದರು.
ಬಾಳೂರು ಅರಣ್ಯ ಭೂಮಿ ಹಾಗೂ ಕಂದಾಯ ಭೂಮಿ ಸರ್ವೆ ಕಾರ್ಯ ಸದ್ಯದಲ್ಲೆ ಪ್ರಾರಂಭವಾಗಲಿದೆ. 10 ಎಕರೆ ವರೆಗೆ ರೈತರಿಗೆ ಕೃಷಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗುವುದು ಎಂದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಎಸ್ ರಘು ಅವರು ಮಾತನಾಡಿ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆ. ದೇಶದ ಮೇಲೆ ಪಾಕಿಸ್ತಾನದ ಆಕ್ರಮಣ ಕಡಿಮೆಯಾಗಲು ಮೋದಿ ಸರ್ಕಾರ ಕಾರಣವಾಗಿದೆ. ಸಂಘಟಿತರಾಗಿ ಪಕ್ಷವನ್ನು ಬಲ ಪಡಿಸಲು ಶ್ರಮಿಸೋಣ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ ರತನ್ ಅವರು ಮಾತನಾಡಿ ಬಿಜೆಪಿ ಪಕ್ಷವನ್ನು ಹೋಬಳಿ ಮಟ್ಟದಿಂದ ಸಂಘಟಿಸುವ ಕಾರ್ಯ ಮಾಡಬೇಕಿದೆ. ಬಿಜೆಪಿ ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸೋಣ. ಪಕ್ಷದ ನಿಷ್ಟವಂತ ಕಾರ್ಯಕರ್ತರೆ ಬಿಜೆಪಿ ಪಕ್ಷದ ಆಸ್ತಿ ಎಂದರು.
ಬಿಜೆಪಿ ಹೋಬಳಿ ಅಧ್ಯಕ್ಷ ವಿಜೇಂದ್ರ ಅವರು ಮಾತನಾಡಿ ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಬಾಳೂರು ಹೋಬಳಿ ಬಿಜೆಪಿ ಘಟಕದ ವತಿಯಿಂದ ಪ್ರಧಾನಿ ನಿಧಿಗೆ 1. 5 ಲಕ್ಷ ಸಹಾಯಧನವನ್ನು ನೀಡಿದ ಹೆಗ್ಗಳಿಗೆ ಈ ಘಟಕಕ್ಕಿದೆ ಎಂದರು.
20 ಕ್ಕೂ ಹೆಚ್ಚು ಮಂದಿ ಈ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅರೆಕುಡಿಗೆ ಶಿವಣ್ಣ, ಬಿ.ಎಂ ಭರತ್, ಗಜೇಂದ್ರ ಕೊಟ್ಟಿಗೆಹಾರ, ಶಶಿಧರ್, ಶಿವರಾಜ್‍ಗೌಡ, ಪಂಚಾಕ್ಷರಿ, ಎಂ.ವಿ ಜಗದೀಶ್, ಸಂಜಯಗೌಡ ಕೊಟ್ಟಿಗೆಹಾರ, ರಘುಪತಿ, ಜಯಪಾಲ್, ಪರೀಕ್ಷಿತ್ ಜಾವಳಿ, ಸುಧಾಕರ್, ಮನೋಜ್, ಸುಮಿತ್ರ, ಲೋಕೇಶ್ ಮರ್ಕಲ್ ಮುಂತಾದವರು ಇದ್ದರು.










