ಬೆಂಗಳೂರು : ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ಇಂದು ತಮ್ಮ 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ವೇಳೆ ಯಶ್ ಪುತ್ರಿ ಐರಾ ಯಶ್ ಅಪ್ಪನಿಗಾಗಿ ಕೇಕ್ ತಯಾರಿಸಿದ್ದಾಳೆ. ರಾಧಿಕಾ ಪಂಡಿತ್ ಅವರು ತಮ್ಮ ಮಗಳೊಂದಿಗೆ ಸೇರಿ ಕೇಕ್ ತಯಾರಿಸುತ್ತಿರುವ ವೀಡೀಯೋವನ್ನು ತಮ್ಮ ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಸಪ್ರೈಸ್, ನಿಮ್ಮ ಜೀವನವನ್ನು ನಾವು ವಹಿಸಿಕೊಂಡಂತೆ ನಾವು ನಿಮ್ಮ ಖಾತೆಯನ್ನು ವಹಿಸಿಕೊಂಡಿದ್ದೇವೆ. ನಿಮ್ಮ ದೊಡ್ಡ ಅಭಿಮಾನಿಯಿಂದ ನಿಮಗೆ ಹುಟ್ಟುಹಬ್ಬದ ಶುಭಾಷಯಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ವೀಡಿಯೋದಲ್ಲಿ ರಾಧಿಕಾ ಪಂಡಿತ್ ಅವರು ಯಶ್ ನಿಮಗೆ ಹುಟ್ಟುಹಬ್ಬದ ಶುಭಾಷಯಗಳು. ಪ್ರತಿ ವರ್ಷ ನಾನು ನಿಮ್ಮ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸುತ್ತಿದೆ. ಆದರೆ ಈ ವರ್ಷ ಕೇಕ್ ತಯಾರಿಸಲು ನನಗೆ ಸಹಾಯ ಮಾಡಲು ಐರಾ ಇದ್ದಾಳೆ. ಅವಳು ಕೇಕ್ ತಯಾರಿಸುವುದಕ್ಕಿಂತ ಹೆಚ್ಚಾಗಿ ತಿನ್ನುತ್ತಿದ್ದಾಳೆ. ಆದರೆ ನಾವು ಅವಳ ಶ್ರಮವನ್ನು ಮೆಚ್ಚಲೇ ಬೇಕು ಎಂದು ಹೇಳೀದ್ದಾರೆ.










