ಕುಮಾರಸ್ವಾಮಿ ಸುತ್ತಮುತ್ತ ಇರುವವರು ರೌಡಿ ಗಳು, ಕಿಂಗ್​ಪಿನ್​ಗಳು.- ಎಂ.ಪಿ.ರೇಣುಕಾಚಾರ್ಯ…

246
firstsuddi

ಬೆಂಗಳೂರು:ಕಿಂಗ್ ಪಿನ್​​ಗಳ ಕುರಿತಾಗಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ  ನಿನ್ನೆ ಸಿಎಂ ಬಹಳ ಹಗುರವಾಗಿ ಮಾತಾಡಿದ್ದಾರೆ. ಯಡಿಯೂರಪ್ಪ ಯಾವತ್ತೂ ಬೇರೆ ಪಕ್ಷಗಳ ಬಗ್ಗೆ ಹಗುರವಾಗಿ ಮಾತಾಡಿಲ್ಲ. ಕುಮಾರಸ್ವಾಮಿ ಸುತ್ತಮುತ್ತ ಇರುವವರು ರೌಡಿಗಳು, ಕಿಂಗ್​ಪಿನ್​ಗಳು. ಗೋವಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದವರಿಗೆ ಟಿಕೆಟ್‌ ನೀಡಿದ್ದು ಯಾಕೆ? ಕ್ರಿಮಿನಲ್‌ಗ‌ಳಿಗೆ ಟಿಕೆಟ್‌ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದರು.  10 ಜನ ಬಿಜೆಪಿ ಶಾಸಕರು ಸಂಪರ್ಕದಲ್ಲಿ ಇದ್ದಾರೆ ಎನ್ನುತ್ತಿರಲ್ಲಾ  ಒಂದು ಹೆಸರು ಬಹಿರಂಗ ಪಡಿಸಿ ನಾನು ಸವಾಲು ಹಾಕುತ್ತೇನೆ ಎಂದಿದ್ದಾರೆ.