ತಮಿಳಿನಿ ಸ್ಟಾರ್ ನಟ ವಿಜಯ್ ಅವರಿಗೆ ಐಟಿ ಶಾಕ್…!

257
firstsuddi

ಚೆನ್ನೈ : ತಮಿಳು ನಟ ವಿಜಯ್ ಅವರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದು, ತಮ್ಮ ಮುಂದಿನ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸೆಟ್‍ನಲ್ಲೇ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ವಿಜಯ್ ನಟನೆಯ “ಬಿಗಿಲ್” ಚಿತ್ರದ ಕುರಿತು ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ನಟ ವಿಜಯ್ ಅವರು ತಮಿಳುನಾಡಿನ ಕಡಲೂರು ಜಿಲ್ಲೆಯ ನೈವೇಲಿಯಲ್ಲಿ ನಡೆಯುತ್ತಿರುವ “ಮಾಸ್ಟರ್” ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಈ ವೇಳೆ ಐಟಿ ಅಧಿಕಾರಿಗಳ ತಂಡವೊಂದು ಚಿತ್ರೀಕರಣ ನಡೆಯುತ್ತಿದ್ದ ಸೆಟ್‍ಗೆ ಭೇಟಿ ನೀಡಿ ವಿಜಯ್ ಅವರಿಗೆ ಶಾಕ್ ನೀಡಿದ್ದು, ಈ ಹಿನ್ನೆಲೆ, ಮಾಸ್ಟರ್ ಸಿನಿಮಾ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕಳೆದ ವರ್ಷ ಬಿಡುಗಡೆಯಾದ ಬಿಗಿಲ್ ಸಿನಿಮಾ 180 ಕೋಟಿ ರೂ ಗಳಿಸಿದ್ದು, ಈ ಸಿನಿಮಾವನ್ನು ಎಜಿಎಸ್ ಸಿನಿಮಾ ಸಂಸ್ಥೆ ನಿರ್ಮಾಣ ಮಾಡಿತ್ತು. ಹೀಗಾಗಿ ಎಜಿಎಸ್ ಸಿನಿಮಾ ಮತ್ತು ಎಜಿಎಸ್ ಎಂಟರ್‍ಟೈನ್‍ಮೆಂಟ್ ಸೇರಿದಂತೆ ಎಜಿಎಸ್ ಗ್ರೂಪ್‍ಗೆ ಸಂಬಂಧಿಸಿದ ಸುಮಾರು 20 ಸಂಸ್ಥೆಗಳಲ್ಲಿ ಐಟಿ ಅಧಿಕಾರಿಗಳು ಶೋಧಕಾರ್ಯ ಕೈಗೊಂಡಿದ್ದಾರೆ.