“ಅಳು” ಒಂದು ಕಲೆಯಾಗಿದೆ :ಜಗದೀಶ್ ಶೆಟ್ಟರ್…

218
firstsuddi

ಬೆಂಗಳೂರು: ಹೆಚ್.ಡಿ ದೇವೇಗೌಡರವರ ಕುಟುಂಬದವರು ಇಂದು ಹೊಳೆನರಸೀಪುರದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಟ್ವಿಟ್ ಮಾಡಿದ್ದಾರೆ. “ಅಳು” ಒಂದು ಕಲೆಯಾಗಿದೆ ಇತ್ತೀಚೆಗೆ. ಮಣ್ಣಿನ ಮಕ್ಕಳು, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಕಣ್ಣೀರು ಹಾಕಲಿಲ್ಲ. ಮಾಜಿ ಪ್ರಧಾನಿಗಳು, ವೀರ ಯೋಧರು ಮಡಿದಾಗ ಅಳಲಿಲ್ಲ. ಮತ್ಯಾಕೆ ಈಗ ಈ ಕಣ್ಣೀರು? ಚುನಾವಣೆಗೆ ಇದೂ ಕೂಡ ಒಂದು ಅಸ್ತ್ರವಾ? “ಅಳುವ ಗಂಡಸರನ್ನು, ನಗುವ ಹೆಂಗಸರನ್ನು ನಂಬಬಾರದು” ಅಂತ ಒಂದು ಗಾದೆ ಇದೆ ಎಂದು ಜಗದೀಶ್ ಶೆಟ್ಟರ್ ಅವರು ಟ್ವಿಟ್ ಮಾಡಿದ್ದಾರೆ.