ಚಿಕ್ಕಮಗಳೂರು : ಗುಜರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಕಡೂರು ನಗರದಲ್ಲಿರುವ ಭಗೀರಥ ವಿದ್ಯಾರ್ಥಿ ನಿಲಯದ ಬಳಿ ನಡೆದಿದೆ. ಫೈರೋಜ್ ಎಂಬುವರ ಗುಜುರಿ ಅಂಗಡಿಯಲ್ಲಿದ್ದ ತ್ಯಾಜ್ಯಕ್ಕೆ ಆಕಸ್ಮಿಕ ಬೆಂಕಿ ತಗುಲಿ ಗುಜರಿ ಅಂಗಡಿ ಸಂಪೂರ್ಣ ಭಸ್ಮವಾಗಿದೆ. 6 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯ ಚರಣೆಯಲ್ಲಿ ತೊಡಗಿದ್ದು, ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Home ಸ್ಥಳಿಯ ಸುದ್ದಿ ಕಡೂರು:ಗುಜರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ…









