ಕಳಸ: ಒಣಗಿಸಲು ಹಾಕಿದ್ದ ಅಡಿಕೆ ಕದ್ದ ಆರೋಪಿ ಸೆರೆ…

358
firstsuddi

ಕಳಸ: ಹಳುವಳ್ಳಿ ಶೈಲೇಶ್ ಎಂಬುವವರ ಗೋಡಾನ್‍ನಲ್ಲಿ ಒಣಗಿಸಲು ಹಾಕಿದ್ದ ಅಡಿಕೆಯನ್ನು ಕದ್ದಿರುವ ಘಟನೆ ಕಳಸ ಸಮೀಪದ ಹಳುವಳ್ಳಿಯಲ್ಲಿ ನಡೆದಿದೆ.ಆರೋಪಿ ಬಸರಿಕಟ್ಟೆಯ ರಾಘವೇಂದ್ರ ಸೆರೆ ಸಿಕ್ಕಿದ್ದು ಇನ್ನೊರ್ವ ಆರೋಪಿ ತಮಿಳುನಾಡು ಮೂಲದ ಮಹೇಂದ್ರ ತಪ್ಪಿಸಿಕೊಂಡು ಹೋಗಿದ್ದಾನೆ.
ಘಟನೆಯ ವಿವರ
ಸೋಮವಾರದ ಬೆಳಗ್ಗಿನ ಜಾವ 3.15ರ ಸಮಯಕ್ಕೆ ಕಳ್ಳರು ಅಡಿಕೆಯನ್ನು ಒಣಗಿಸಲು ಹಾಕಿಸಿದ ಸ್ಥಳಕ್ಕೆ ಬಂದಿದ್ದಾರೆ.ಅಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಿದ್ದನ್ನು ನೋಡಿದ ಕಳ್ಳರು ಸಿಸಿ ಕ್ಯಾಮರಾವನ್ನು ಮೊದಲು ಕದ್ದು ನಂತರ ಅಡಿಕೆಯನ್ನು ಕದ್ದು ಬೈಕ್‍ನಲ್ಲಿ ಹೋಗಿದ್ದಾರೆ. ಬೆಳಿಗ್ಗೆ ಎದ್ದು ಸಿಸಿ ಕ್ಯಾಮರಾ ನೋಡಿದಾಗ ಒಂದು ಕ್ಯಾಮರಾ ಕಾರ್ಯನಿರ್ವಹಿಸದೆ ಇದ್ದುದನ್ನು ಗಮನಿಸಿದ ಶೈಲೇಶ್ ಅಡಿಕೆ ಓಣಗಿಸಲು ಹಾಕಿದ್ದ ಸ್ಥಳಕ್ಕೆ ಬಂದಾಗ ಸಿಸಿ ಕ್ಯಾಮರಾವನ್ನು ಕದ್ದು ಅಡಿಕೆಯನ್ನು ಕದ್ದಿರುವುದು ಗಮನಕ್ಕೆ ಬಂದಿದೆ.
ಇತ್ತ ಅಡಿಕೆ ಕದ್ದ ಆರೋಪಿ ಅಡಿಕೆಯನ್ನು ಕಳಸಕ್ಕೆ ತಂದು ಅಂಗಡಿಯೊಂದಕ್ಕೆ ಮಾರಲು ಬಂದಿದ್ದಾರೆ.ಅನುಮಾನ ಬಂದ ಅಂಗಡಿ ಮಾಲೀಕ ಪೊಲೀಸರಿಗೆ ವಿಷಯ ತಿಳಿಸಿ ಕೂಡಲೆ ಆರೋಪಿಯನ್ನು ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ತಪ್ಪಿಸಿಕೊಂಡಿದ್ದಾನೆ.ಆರೋಪಿಯಿಂದ 20 ಕೆ.ಜಿ ಅಡಿಕೆ,ಬೈಕ್ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.