ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ಭಗವತಿ ಗುಡ್ಡಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶ…

269
firstsuddi

ಕಳಸ:ಬಂಡೀಪುರ ಅಭಯಾರಣ್ಯದಲ್ಲಿ ಕಾಡ್ಗಿಚ್ಚು ಅಪಾರ ಪ್ರಮಾಣದ ಕಾಡು ನಾಶವಾದ ಬೆನ್ನಲ್ಲೇ ಇಲ್ಲಿಯ ಕುದುರೆಮುಖ ಅಭಯಾರಣ್ಯಕ್ಕೂ ಕಿಡಿಗೇಡಿಗಳು ಬೆಂಕಿಹಚ್ಚಿದ ಪರಿಣಾಮ ನೂರಾರು ಎಕರೆ ಅರಣ್ಯ ಭೂಮಿ ನಾಶವಾಗಿದ್ದು,ಬೆಂಕಿಯ ಕೆನ್ನಾಲಿಗೆಗೆ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ.
ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ಭಗವತಿ ಗುಡ್ಡಕ್ಕೆ ಸೋಮವಾರ ಮಧ್ಯಾಹ್ನ ಕಿಡಿಗೇಡಿಗಳು ಬೆಂಕಿಹಚ್ಚಿದ ಪರಿಣಾಮ ನೂರಾರು ಎಕರೆ ಅರಣ್ಯ ಭೂಮಿ ಬೆಂಕಿಗಾಹುತಿಯಾಗಿದೆ.ಅರಣ್ಯ ಭೂಮಿಗೆ ಬಿದ್ದ ಬೆಂಕಿಯು ಮುಗಿಲೆತ್ತರಕ್ಕೆ ಹರಡಿಕೊಂಡಿದ್ದನ್ನು ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಿ ಬೆಂಕಿ ಆರಿಸುವಲ್ಲಿ ಮುಂದಾದರೂ ಗಾಳಿಯ ರಭಸ ಹಾಗೂ ಬಿಸಿಲಿನ ತಾಪದ ನಡುವೆ ಬೆಂಕಿಯ ತೀವೃತೆ ಹರಡುತ್ತಲೇ ಇತ್ತು. ರಸ್ತೆಯ ಬದಿಯವರೆಗೂ ಬೆಂಕಿ ಹರಡಿಕೊಂಡಿದ್ದು,ಇಡೀ ವಾತಾವರಣ ಹೊಗೆಯಿಂದ ಕೂಡಿತ್ತು.
ಈ ಅರಣ್ಯ ಭೂಮಿಯಲ್ಲಿ ಹೆಚ್ಚಾಗಿ ಕಡವೆ,ಜಿಂಕೆ,ಕಾಡುಕುರಿ,ಸಿಂಗಳಿಕ,ಮಂಗ,ಪುಣುಗುಬೆಕ್ಕು,ಕಾಡುಪಾಪ,ಅಳಿಲು,ನವಿಲು ಮುಂತಾದ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಕಂಡು ಬರುತ್ತಿದ್ದವು.ಆದರೆ ಬೆಂಕಿಯ ಕೆನ್ನಾಲಿಗೆಗೆ ಪ್ರಾಣಿಗಳು ದಿಕ್ಕಾಪಾಲಾಗಿ ಓಡಿದ್ದು,ಹಲವು ವಿಧದ ಸಸ್ಯಗಳು,ಮರಗಳು,ಅಪಾರ ಪ್ರಮಾಣದ ವನ್ಯ ಸಂಪತ್ತು ಬೆಂಕಿ ಪಾಲಾಗಿ ಹೋದವು.

ನೂರಾರು ಎಕರೆ ನಾಶ
ಸೋಮವಾರ ಮಧ್ಯಾಹ ಕಾಣಿಸಿಕೊಂಡ ಬೆಂಕಿ ಬೀಸುತ್ತಿರುವ ಗಾಳಿಯಿಂದ ಕ್ಷಣ ಮಾತ್ರದಲ್ಲಿ ಕಿ.ಮೀಗಟ್ಟಲೆ ಹೊತ್ತಿಉರಿದಿದೆ.ಆಳೆತ್ತರಕ್ಕೆ ಹರಡಿಕೊಂಡಿರುವ ಬೆಂಕಿಯನ್ನು ನಂದಿಸಲು ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ.ಸುಮಾರು 25 ಜನ ಸಿಬ್ಬಂದಿಗಳು,ಗುತ್ತಿಗೆ ಕಾರ್ಮಿಕರು ಬ್ಲೋವರ್ ಮಿಷನ್ ಮೂಲಕ ಕಿ.ಮೀ ದೂರಕ್ಕೂ ಹೆಚ್ಚು ದೂರ ನಡೆದಾಡಿಕೊಂಡು ಹೋಗಿ ಬೆಂಕಿಯನ್ನು ನಂದಿಸುವ ಕಾರ್ಯಚರಣೆ ಮಾಡಿದ್ದಾರೆ.ಪಿಕಪ್ ವಾಹನಗಳಲ್ಲಿ ನೀರಿನ ಡ್ರಮ್ ಇಟ್ಟು ಪಂಪ್ ಮುಖಂತರ ಹೊತ್ತಿ ಉರಿಯುವ ಬೆಂಕಿಗೆ ನೀರು ಸಿಂಪಡಿಸಿ ಮದ್ಯರಾತ್ರಿಯವರೆಗೂ ಸಿಬ್ಬಂದಿಗಳು ಹರಸಾಹಸಪಟ್ಟು ಬೆಂಕಿಯನ್ನು ಹತೋಟಿಗೆ ತಂದು ಬೆಂಕಿಯು ಕಾಡು ಪೂರ್ತಿ ವ್ಯಾಪಿಸುವುದನ್ನು ತಡೆಯಲು ಯಶಸ್ವಿಯಾದರು.ಮಂಗಳವಾರದ ಬೆಳಗಿನ ವರೆಗೂ ಅರಣ್ಯ ಸಿಬ್ಬಂದಿಗಳು ಕಾಡಿನಲ್ಲೇ ಮೋಕ್ಕಾಂ ಹೂಡಿ ಹೆಚ್ಚಿನ ಅನಾಹುತ ನಡೆಯದಂತೆ ನೋಡಿಕೊಂಡರು.