ಸಚಿವ ಡಿ ಕೆ ಶಿವಕುಮಾರ್ ಗೆ ಜಾರಿ ನಿರ್ದೇಶನಾಲಯದಿಂದ ನೋಟಿಸ್…

216
firstsuddi

ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ. ಐಟಿ ದಾಳಿ ವೇಳೆ ಸಂಬಂಧಿಗಳು ಮತ್ತು ಆಪ್ತರ ಮನೆಗಳಲ್ಲಿ  ಅಪಾರ ಹಣ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿದಂತೆ ತಕ್ಷಣ ವಿಚಾರಣೆಗೆ ಹಾಜರಾಗುವಂತೆ  ಡಿ.ಕೆ.ಶಿವಕುಮಾರ್​ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್​ ನೀಡಿದೆ. ಈ ಬಗ್ಗೆ  ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು  ಇದು ದ್ವೇಷದ ರಾಜಕಾರಣವೆಂದು ನಾನು ಆರೋಪ ಮಾಡುವುದಿಲ್ಲ. ಯಾರ ವಿರುದ್ಧವೂ ನಾನು ಮಾತನಾಡುವುದಿಲ್ಲ. ನೋಟಿಸ್​ ಬಗ್ಗೆ ಅವರೇ ಉತ್ತರಿಸುತ್ತಾರೆ ಎಂದಿದ್ದಾರೆ.