ಶ್ರೀ ಜಗದಾತ್ಮಾನಂದಜಿ ಸ್ವಾಮೀಜಿ ನಿಧನಕ್ಕೆ ಸಂತಾಪ ಸೂಚಿಸಿದ ಸಚಿವ ಜಿ ಟಿ ದೇವೇಗೌಡ…

287
firstsuddi

ಮೈಸೂರು: ‘ಬದುಕಲು ಕಲಿಯಿರಿ’ ಗ್ರಂಥದ ಖ್ಯಾತಿಯ ಜಗದಾತ್ಮಾನಂದ ಜೀ  ಅವರ ನಿಧನಕ್ಕೆ ಸಚಿವ ಜಿ ಟಿ ದೇವೇಗೌಡ ಅವರು  ಸಂತಾಪ ಸೂಚಿಸಿದ್ದು , ಜೀವನದ ಮೇಲೆ ಅಗಾಧವಾದ ಪರಿಣಾಮ ಬೀರಿದ “ಬದುಕಲು ಕಲಿಯಿರಿ” ಗ್ರಂಥದ ಲೇಖಕರು ಮೈಸೂರಿನ ರಾಮಕೃಷ್ಣ ವಿದ್ಯಾ ಶಾಲೆಯ ಹಿರಿಯ ಮುಖ್ಯಸ್ಥರು ಆಗಿದ್ದ ರಾಮಕೃಷ್ಣ ಅಶ್ರಮದ ಹಿರಿಯ ಸನ್ಯಾಸಿ ಶ್ರೀ ಜಗದಾತ್ಮನಂದರ ಹಠಾತ್ ನಿಧನ ನನ್ನ ಮನಸ್ಸಿಗೆ ತುಂಬಾ ನೋವು ತಂದಿದೆ. ಇವರ ಆತ್ಮಕ್ಕೆ ತಾಯಿ ಚಾಮುಂಡೇಶ್ವರಿಯು ಚಿರ ಶಾಂತಿ ನೀಡಲಿ ಎಂದು ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದಾರೆ.