ಚಿಕ್ಕಮಗಳೂರು : ಜ್ಯೋತಿಷಿ ಮಾತು ಕೇಳಿ ಊರು ಬಿಟ್ಟಿದ್ದ ಹಕ್ಕಿಪಿಕ್ಕಿ ಕುಟುಂಬಗಳ ಮನವೊಲಿಸುವಲ್ಲಿ ತಾಲೂಕು ಆಡಳಿತ ಹಾಗೂ ಶಾಸಕರು ಯಶಸ್ವಿಯಾಗಿದ್ದಾರೆ. ವಾರದಲ್ಲಿ ಇಬ್ಬರು, ಎಂಟು ವರ್ಷದಲ್ಲಿ 25ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ ಎಂದು ಜ್ಯೋತಿಷ್ಯ ಕೇಳಿದ್ದಕ್ಕೆ ಕೇರಳ ಮೂಲದ ಜ್ಯೋತಿಷಿ ಗ್ರಾಮ ತೊರೆಯುವಂತೆ ಸೂಚಿಸಿದ್ದು. ಜೀವಭಯದಿಂದ 50ಕ್ಕೂ ಅಧಿಕ ಕುಟುಂಬಗಳು ರಾತ್ರೋರಾತ್ರಿ ಸಾಕು ಪ್ರಾಣಿಗಳನ್ನ ಬಿಟ್ಟು ಗ್ರಾಮ ತೊರೆದಿದ್ರು. ಇದೀಗ, ಎನ್.ಆರ್.ಪುರದ ತಹಶೀಲ್ದಾರ್ ಹಾಗೂ ಶಾಸಕ ಟಿ.ಡಿ.ರಾಜೇಗೌಡ ಅಲೆಮಾರಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೇರೆಡೆ ಜಾಗ ನೀಡುವುದಾದ್ರೆ, ಶಾಶ್ವತವಾಗಿ ಎನ್.ಆರ್.ಪುರದಲ್ಲೇ ನೆಲೆಸೋದಾಗಿ ಅಲೆಮಾರಿ ಜನಾಂಗದವರು ಭರವಸೆ ನೀಡಿದ್ದಾರೆ. ಎನ್.ಆರ್.ಪರದಲ್ಲಿ 50ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳಿಗೆ ತಾತ್ಕಾಲಿಕವಾಗಿ ಸೂರಿನ ವ್ಯವಸ್ಥೆ ಮಾಡಿದ್ದಾರೆ. ಇದೇ ವೇಳೆ, ಅಲೆಮಾರಿ ಜನಾಂಗದವವ್ರು ಶಾಸಕ ಹಾಗೂ ತಾಲೂಕು ಆಡಳಿತಕ್ಕೆ ಸ್ಥಳಿಯವಾಗಿ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯ ನೀಡುವಂತೆ ಒತ್ತಾಯಿಸಿದ್ದಾರೆ. ಸದ್ಯಕ್ಕೆ ಎನ್.ಆರ್.ಪುರದಲ್ಲಿ ಮುಚ್ಚಿರೋ ಹೊಗ್ರಳ್ಳಿ ಶಾಲೆಯಲ್ಲಿ ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದ್ದು, ಗಂಜೀ ಕೇಂದ್ರದ ಮಾದರಿಯಲ್ಲಿ ಅಲೆಮಾರಿ ಕುಟುಂಬಗಳಿಗೆ ಆಶ್ರಯ ನೀಡಲಾಗಿದೆ.