ಮೂಡಿಗೆರೆ : ಕಳೆದುಕೊಂಡ ಪರ್ಸ್‍ನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ…

339
firstsuddi

ಕೊಟ್ಟಿಗೆಹಾರ: ಹಣ ಮತ್ತು ದಾಖಲೆ ಪತ್ರಗಳಿದ್ದ ಪರ್ಸ್‍ನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಬಣಕಲ್‍ನ ಬಿ.ಪಿ ಸದಾಶಿವಶೆಟ್ಟಿ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.
ಬಿನ್ನಡಿ ಗ್ರಾಮದ ಶರತ್ ಎಂಬುವವರು ಇಂದು ಸಂಜೆ ಬಣಕಲ್‍ನ ಕಲ್ಲಾನಾಥೇಶ್ವರ ಜಾತ್ರೋತ್ಸವಕ್ಕೆ ಹೋಗುವ ಸಂದರ್ಭದಲ್ಲಿ ಚೇಗು ಗ್ರಾಮದ ಸಾಗುವ ಮಾರ್ಗದಲ್ಲಿರುವ ಸೇತುವೆ ಬಳಿ ಸುಮಾರು 7 ಸಾವಿರ ನಗದು ಹಾಗೂ ಗುರುತಿನ ದಾಖಲೆಗಳಿದ್ದ ಪರ್ಸ್‍ನ್ನು ಕಳೆದುಕೊಂಡಿದ್ದು, ಅದೇ ಮಾರ್ಗವಾಗಿ ಬರುತ್ತಿದ್ದ ಬಣಕಲ್‍ನ ಬಿ.ಪಿ ಸದಾಶಿವಶೆಟ್ಟಿ ಎಂಬುವವರಿಗೆ ಪರ್ಸ್ ಸಿಕ್ಕಿದೆ.
ಕೂಡಲೇ ಪರ್ಸ್‍ನಲ್ಲಿದ್ದ ಗುರುತಿನ ಚೀಟಿಯ ವಿಳಾಸದ ಮೂಲಕ ಹುಡುಕಾಟ ನಡೆಸಿದಾಗ ಬಿನ್ನಡಿಯ ಶರತ್ ಎಂಬುವವರಿಗೆ ಸೇರಿದ ಪರ್ಸ್ ಎಂದು ತಿಳಿದು ಬಂದಿದ್ದು, ಇಂದು ರಾತ್ರಿ ಕೊಟ್ಟಿಗೆಹಾರಕ್ಕೆ ಬಂದು ಶರತ್ ಅವರನ್ನು ಬೇಟಿಯಾಗಿ ನಗದು ಹಾಗೂ ದಾಖಲೆ ಇದ್ದ ಪರ್ಸ್‍ನ್ನು ಶರತ್ ಅವರಿಗೆ ಹಿಂದಿರುಗಿದುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಪರ್ಸ್ ಹಿಂದಿರುಗಿಸಿದ ಬಿ.ಪಿ ಸದಾಶಿವಶೆಟ್ಟಿ ಅವರಿಗೆ ಶರತ್ ಕೃತಜ್ಞತೆ ತಿಳಿಸಿದ್ದಾರೆ.