ಮೂಡಿಗೆರೆ : ನಂದೀಪುರ ಗ್ರಾಮಕ್ಕೆ ಮಾಜಿ ಸಚಿವ ಬಿ.ಬಿ. ನಿಂಗಯ್ಯ ಭೇಟಿ…

517
firstsuddi

ಮೂಡಿಗೆರೆ : ನಂದೀಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ವೈದ್ಯರೊಬ್ಬರಿಗೆ ಕೋವಿಡ್-19 ಸೋಂಕು ಪತ್ತೆಯಾಗಿದ್ದರಿಂದ ಇಂದು ನಂದೀಪುರ, ಮಾಕೋನಹಳ್ಳಿ ಹಾಗೂ ಬಸ್ಕಲ್ ಗ್ರಾಮಕ್ಕೆ ಮಾಜಿ ಸಚಿವರಾದ ಬಿ.ಬಿ. ನಿಂಗಯ್ಯ ಅವರು ಭೇಟಿ ನೀಡಿ ಅಲ್ಲಿನ ಜನರ ಜೊತೆಗೆ ಚರ್ಚಿಸಿದರು. ನೀವುಗಳು ಯಾರೂ ಸಹ ಆತಂಕ ಪಡುವ ಅಗತ್ಯವಿಲ್ಲ. ನಾನು ಈಗಾಗಲೇ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ತಾಲ್ಲೂಕು ಆಡಳಿತ, ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಜಿಲ್ಲಾಡಳಿತವು ಎಲ್ಲಾ ರೀತಿಯ ಸೂಕ್ತ ಕ್ರಮವನ್ನು ಈಗಾಗಲೆ ಕೈಗೊಂಡಿದೆ. ಅವರು ವಾಸವಿದ್ದ ಪ್ರದೇಶವನ್ನು ಈಗಾಗಲೇ ಸೀಲ್‍ಡೌನ್ ಮಾಡಲಾಗಿದ್ದು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾಕೋನಹಳ್ಳಿ ಸಹಕಾರಿ ಸಂಘದ ಅಧ್ಯಕ್ಷರಾದ ಗಬ್ಬಳ್ಳಿ ಚಂದ್ರೇಗೌಡ, ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಗದೀಶ್, ಜೆಡಿಎಸ್ ಮುಖಂಡರಾದ ಸಂದೀಪ್, ಮಗ್ಗಲಮಕ್ಕಿ ರವಿ, ಮಾಕೋನಹಳ್ಳಿ ಸುರೇಶ್, ಮಾ. ಗ್ರಾ. ಪಂ ಸದಸ್ಯರಾದ ರಮೇಶ್, ಸಂತೋಷ್ ಇತರ ಗ್ರಾ. ಪಂ ಸದಸ್ಯರು ಹಾಜರಿದ್ದರು.