ಚಿನ್ನಾಭರಣ ಕಳೆದುಕೊಂಡಿದ್ದವರಿಗೆ ಬೆಂಗಳೂರು ಪೊಲೀಸರಿಂದ ಹೊಸ ವರ್ಷದ ಗಿಫ್ಟ್…

178
firstsuddi

ಬೆಂಗಳೂರು: ನಿನ್ನೆ ಬೆಂಗಳೂರಿನ ಪೊಲೀಸರು ವಿಶೇಷವಾದ ರೀತಿಯಲ್ಲಿ ತಡ ರಾತ್ರಿ  ಸರ್ಪ್ರೈಸ್ ಗಿಫ್ಟ್  ಜೊತೆಗೆ ಹೊಸ ವರ್ಷದ  ಶುಭಾಶಯವನ್ನು ಹೇಳಿದ್ದಾರೆ.  ಅದು ಹೇಗೆಂದರೆ ಇತ್ತೀಚಿಗೆ ನಗರದಲ್ಲಿ ಕಳ್ಳತನ  ಪ್ರಕರಣಗಳು ಹೆಚ್ಚಾಗಿದ್ದು, ಕಳುವಾದ ಚಿನ್ನಾಭರಣಗಳ ಬಗ್ಗೆ ಮಾಲೀಕರು  ಪೊಲೀಸ್ ಠಾಣೆಯಲ್ಲಿ   ದೂರು ದಾಖಲಿಸಿದ್ದರು. ಇದರ ಬಗ್ಗೆ ಪೊಲೀಸರು ಪರಿಶೀಲನೆ  ನಡೆಸಿ  ಕಳ್ಳತನವಾಗಿದ್ದ ಚಿನ್ನಾಭರಣವನ್ನು ಪತ್ತೆ ಹಚ್ಚಿದ್ದು,   ಆ   ಚಿನ್ನಾಭರಣಗಳನ್ನು ತಡ ರಾತ್ರಿ  ಕಳೆದುಕೊಂಡಿದ್ದವರ ಮನೆಗೆ ಖುದ್ದಾಗಿ ತೆರಳಿ  ಚಿನ್ನಾಭರಣವನ್ನು ಕೊಡುವ ಮೂಲಕ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಡಿಸಿಪಿ ರವಿ ಚನ್ನಣ್ಣನವರ್, ಡಿಸಿಪಿ ಅಣ್ಣಾಮಲೈ ಸೇರಿದಂತೆ  ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚಿನ್ನ ಕಳೆದುಕೊಂಡವರ ಮನೆಗೆ ತೆರಳಿ ಚಿನ್ನವನ್ನು ವಾಪಸ್ ನೀಡಿದ್ದಾರೆ. ಕಳೆದುಕೊಂಡಿದ್ದವರು ಚಿನ್ನವನ್ನು ವಾಪಾಸ್ ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ.