ಕಳಸ: ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ಬಸ್ರಿಕಲ್ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ನಡೆದಿದೆ.

ಬಸ್ರಿಕಲ್ ಚೆಕ್ ಪೋಸ್ಟ್‍ನಲ್ಲಿ ರಾತ್ರಿ ಪಾಲಯದಲ್ಲಿ ಉದಯಕುಮಾರ್ ಮತ್ತು ಶಶಾಂಕ್ ಇಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಳಗಿನ ಜಾವ 3.30ರ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಏಕಾ ಏಕಿ ಪೆಟ್ರೋಲ್ ತುಂಬಿದ ಸುಮಾರು ಆರು ಬಾಟಲಿಗಳನ್ನು ಚೆಕ್ ಪೋಸ್ಟ್ ಪಕ್ಕದಲ್ಲಿದ್ದ ಶಾಲೆಯ ಕಡೆಯಿಂದ ಎಸೆದಿದ್ದಾರೆ.ಸ್ಪೋಟ ಹಾಗು ಬೆಂಕಿಯನ್ನು ಕಂಡ ಅರಣ್ಯ ಸಿಬ್ಬಂದಿಗಳು ಬೊಬ್ಬೆ ಹೊಡೆದುಕೊಂಡು ಹೊರಗಡೆ ಬಂದಿದ್ದಾರೆ.ಆ ಸಂದರ್ಭದಲ್ಲಿ ಬಾಟಲಿಗಳನ್ನು ಎಸೆದು ಪರಾರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಅಕ್ಕ ಪಕ್ಕದಲ್ಲಿರುವ ಮನೆ ಹಾಗೂ ಅಂಗಡಿ ಮಾಲಿಕರು ಎದ್ದು ಬಂದಿದ್ದಾರೆ.ಆದರೆ ಸ್ಪೋಟದಿಂದ ಹೆದರಿದ ಆಸು ಪಾಸಿನವರು ಮನೆಯಿಂದ ಹೊರಗಡೆ ಬರುವಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಚೆಕ್‍ಪೋಸ್ಟ್ ಸಿಬ್ಬಂದಿಗಳು ಘಟನೆಯನ್ನು ವಿವರಿಸುತ್ತಾರೆ.

ಘಟನೆಯಿಂದ ರಿಜಿಸ್ಟರ್ ಪುಸ್ತಕವೊಂದು ಸ್ವಲ್ಪ ಮಟ್ಟಿಗೆ ಸುಟ್ಟು ಹೋಗಿದ್ದು ಬೇರ್ಯಾವ ಅನಾಹುತಗಳು ಸಂಭವಿಸಿಲ್ಲ.
ಘಟನೆಗೆ ಸಂಬಂದಪಟ್ಟಂತೆ ಸ್ಥಳಕ್ಕೆ ಅಡಿಷನಲ್ ಎಸ್‍ಪಿ ಶೃತಿ, ಕುದುರೆಮುಖ ವೃತ್ತ ನಿರೀಕ್ಷಕ ರಾಮಚಂದ್ರ, ಕುದುರೆಮುಖ ಆರ್‍ಎಪ್‍ಒ ಮದುಸೂದನ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










