ಪ್ರಧಾನಿ ಮೋದಿ ವಿರುದ್ಧ ರಾಹುಲ್​ ಗಾಂಧಿ ವಾಗ್ದಾಳಿ…

169
firstsuddi

ಹಾವೇರಿ: ಇಂದು ಹಾವೇರಿಯಲ್ಲಿ  ಕಾಂಗ್ರೆಸ್ ಜನ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು
ಮೋದಿಯವರು ರಾಜ್ಯಕ್ಕೆ ಬಂದಾಗ ರಾಜ್ಯ ಸರ್ಕಾರ ರೈತರಿಗೆ ಲಾಲಿಪಾಪ್ ಕೊಡುತ್ತದೆ ಎಂದು ವ್ಯಂಗ್ಯವಾಡಿದ್ದರು. ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಕಾಂಗ್ರೆಸ್ ಕೊಟ್ಟ ಭರವಸೆಯಂತೆ ನಡೆದುಕೊಂಡಿದೆ. ದೇಶದಲ್ಲಿ ೪೦ ವರ್ಷದಲ್ಲೇ ಅತಿ ಹೆಚ್ಚು ನಿರುದ್ಯೋಗ ಉಂಟಾಗಿದೆ. ವರ್ಷಕ್ಕೆ 2 ಕೊಟಿ ಉದ್ಯೋಗ ದ ನಿರೀಕ್ಷೆ ಮೋದಿಯಿಂದ ಸಾಧ್ಯವೇ? ಮೋದಿಯವರು ಯುವಕರಿಗೆ ಮೋಸ ಮಾಡಿದ್ದಾರೆ.
 ಕಪ್ಪು ಹಣ ನಿಯಂತ್ರಣಕ್ಕಾಗಿ ನೋಟು ರದ್ಧತಿ ಮಾಡಲಾಯಿತು. ಈ ವೇಳೆ ಸಾಲಿನಲ್ಲಿ ಯಾರು ನಿಂತಿದ್ದವರು, ಅನಿಲ್ ಅಂಬಾನಿ ಇದ್ದರಾ? ನೀರವ್ ಮೋದಿ ಇದ್ದರಾ? ವಿಜಯ ಮಲ್ಯ ಇದ್ದರಾ? ಯಾರು ಇದ್ದವರು, ಇದ್ದಿದ್ದು ದೇಶದ ಬಡ ಜನರು. ಇವರ ಹಣವನ್ನ ತೆಗೆದುಕೊಂಡು ಮೋದಿಯವರು ಉದ್ಯಮಿಗಳ ಪರೋಕ್ಷವಾಗಿ ನೀಡಿದ್ದಾರೆ.ಚುನಾವಣೆಗೆ ಮೊದಲು ಹೇಳಿದ್ದಿರಿ ನನ್ನ ಚೌಕಿದಾರ್ ಮಾಡಿ ಎಂದು, ನಿಮ್ಮನ್ನು ಮಾಡಲಾಗಿತ್ತು. ರಫೆಲ್‌ ಮೂಲ ಒಪ್ಪಂದವನ್ನು ತಪ್ಪಿಸಿ ಗೆಳೆಯ ಅಂಬಾನಿಗೆ 30000 ಕೋಟಿ ಲಾಭ ಮಾಡಿಕೊಡುವ ಉದ್ದೇಶ ನಿಮ್ಮದಾಗಿತ್ತು. ನೀವು ದೇಶದ ಚೌಕಿದಾರ ಆಗಲಿಲ್ಲ, ಅಂಬಾನಿ, ಅದಾನಿಯವರ ಚೌಕಿದಾರ ಆಗಿದ್ದೀರಿ.

ಪುಲ್ವಾಮಾ ದಾಳಿಗೆ ಯಾರು ಹೊಣೆ? ಮಸೂದ್ ಅಜರ್ ಅನ್ನು ಜೈಲಿನಿಂದ ಬಿಡಿಸಿ ಪಾಕಿಸ್ತಾನಕ್ಕೆ ಬಿಟ್ಟು ಬಂದಿದ್ದು ಯಾರು? ಇದನ್ನು ನೀವು ಯಾಕೆ ಮಾತನಾಡುತ್ತಿಲ್ಲ? ನಾವು ನಿಮ್ಮ ಹಾಗೆ ಅಲ್ಲ, ನಾವು ಯಾವತ್ತಿಗೂ ಭಯೋತ್ಪಾದನೆಗೆ ತಲೆ ಬಾಗುವುದಿಲ್ಲ.ಸಂಸತ್ತಿನಲ್ಲಿ ನಾನು ಪ್ರಶ್ನಿಸಿದೆ ರಫೇಲ್ ಮೂಲ ಒಪ್ಪಂದ ಬಿಟ್ಟು ಅನಿಲ್ ಅಂಬಾನಿಗೆ ಕೊಟ್ಟಿದ್ದು ಯಾಕೆ? ಅಂಬಾನಿ ಕಂಪನಿಗೆ ಯುದ್ಧ ವಿಮಾನ‌ತಯಾರಿಕೆಯ ಅನುಭವ ಏನಿದೆ? ಮೂಲ ಒಪ್ಪಂದದ ಬೆಲೆಗಿಂತ ಹೆಚ್ಚಿನ ಬೆಲೆಗೆ ಖರೀದಿಸಿದ್ದು ಯಾಕೆ? ಮೋದಿ ಪ್ರಶ್ನೆಗೆ ಉತ್ತರಿಸಲಿಲ್ಲ. ತಪ್ಪಿತಸ್ಥ ಭಾವನೆ ಅವರಲ್ಲಿದೆಕಾಂಗ್ರೆಸ್ ಪಕ್ಷ ಐತಿಹಾಸಿಕ ಕ್ರಾಂತಿ ಮಾಡುತ್ತದೆ. ಕ್ಷೀರ ಕ್ರಾಂತಿ, ಹಸಿರು ಕ್ರಾಂತಿ, ಔದ್ಯೋಗಿಕ ಕ್ರಾಂತಿ ಮಾಡಿದ ಕಾಂಗ್ರೆಸ್ ಮತ್ತೊಂದು ಕ್ರಾಂತಿಯ ಭರವಸೆ ಕೊಡುತ್ತೇವೆ. ದೇಶದ ಎಲ್ಲಾ ಬಡ ಜನರಿಗೂ ಕನಿಷ್ಟ ಆದಾಯದ ಭರವಸೆ.ಕನಿಷ್ಠ ವರಮಾನ ಯೋಜನೆಯಿಂದ ಪ್ರತಿ ತಿಂಗಳು ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಮಾಡಲಾಗುವುದು. ಮೋದಿಯವರು ಕೆಲವೇ ಕೆಲವು ಉದ್ಯಮಿಗಳ ಖಾತೆಗೆ ಹಣ ಹಾಕಲು ಸಾಧ್ಯ ಎನ್ನುವುದಾದರೆ, ನಾವು ಬಡವರ ಖಾತೆಗೆ ಹಣ ಕೊಡಲು ಯಾಕೆ ಸಾಧ್ಯವಿಲ್ಲಾ? ನಾವು ಕೊಟ್ಟೇ ಕೊಡುತ್ತೇವೆ.

ಮೋದಿಯವರು ಭಾರತವನ್ನ 2 ದೇಶ ಮಾಡಲು ಹೊರಟಿದ್ದಾರೆ. ಒಂದು ಅಂಬಾನಿ, ಅದಾನಿ, ನೀರವ್ ಮೋದಿ, ಮಲ್ಯರಂತಹ ಶ್ರೀಮಂತರ ದೇಶ. ಮತ್ತೊಂದು ಬಡ, ರೈತ, ಕಾರ್ಮಿಕ, ನಿರುದ್ಯೋಗಿಗಳ ದೇಶ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದೇ ದೇಶ ಇರಲಿದೆ. ಅದು ಎಲ್ಲರ ದೇಶ. ಲೂಟಿಕೋರರನ್ನು ಜೈಲಿಗೆ ಹಾಕುತ್ತೇವೆ.ಜಾತಿ, ಧರ್ಮದ ಹೆಸರಲ್ಲಿ ದೇಶವನ್ನು ವಿಭಜಿಸಲು ಬಿಡುವುದಿಲ್ಲ. ದೇಶದ ಜನರ ನಡುವೆ ಕೋಮು ಸೌಹಾರ್ಧ ಬೆಸೆಯುವ ಕೆಲಸ ಕಾಂಗ್ರೆಸ್ ಮಾಡಲಿದೆ. ರೈತರು ದೇಶದ ಬೆನ್ನೆಲಬು. ರೈತರ ರಕ್ಷಣೆ ನಮ್ಮ ಹೊಣೆ. ಎಂಥದೇ ಸಂದರ್ಭದಲ್ಲೂ ನಿಮ್ಮ ಜೊತೆ ಇರುತ್ತೇವೆ. ಮೋದಿ ಸರ್ಕಾರ ಯುವಕರಿಗೆ ವಂಚಿಸಿದ್ದಾರೆ ಮೇಕಿನ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ ವೈಫಲ್ಯದಿಂದ ದೇಶದಲ್ಲಿ ಅತಿ ಹೆಚ್ಚು ನಿರುದ್ಯೋಗ ಉಂಟಾಗಿದೆ ಎಂದರು.