ಮಂಡ್ಯ: ಅಂಬರೀಷ್ ಅಂತಿಮ ದರ್ಶನಕ್ಕೆ ಬಾರದೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದ ಮಾಜಿ ಸಂಸದೆ ರಮ್ಯಾ ಅವರು ರಾತ್ರೋ ರಾತ್ರಿ ಮಂಡ್ಯದಿಂದ ಮನೆ ಖಾಲಿ ಮಾಡಿದ್ದಾರೆ. ರಮ್ಯಾ ಅವರು ಮಂಡ್ಯದ ವಿದ್ಯಾನಗರದ ಕೆ.ಆರ್.ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ಇದ್ದ ವಸ್ತುಗಳನ್ನು ಎರಡು ಲಾರಿಗಳಲ್ಲಿ ತಡರಾತ್ರಿ ಸಾಗಿಸಿದ್ದು ,ಇದೀಗ ಇದ್ದಕ್ಕಿದ್ದಂತೆ ರಾತ್ರೋರಾತ್ರಿ ರಮ್ಯಾ ಮಂಡ್ಯದ ಮನೆ ಖಾಲಿ ಮಾಡಿರೋದು ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಮ್ಯಾ ಅವರು ಈ ಮೂಲಕ ರಾಜಕೀಯವಾಗಿ ಮಂಡ್ಯದಿಂದ ದೂರ ಸರಿದರೇ ಎಂಬ ಪ್ರಶ್ನೆ ಮೂಡಿದೆ ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.










