ಶಬರಿಮಲೆ ಅಯ್ಯಪ್ಪಸ್ವಾಮಿ  ದೇವಸ್ಥಾನಕ್ಕೆ  ತೆರಳಲು ಯತ್ನಿಸಿದ್ದ  ರೆಹನಾ ಫಾತಿಮಾ ಬಂಧನ…

357
firstsuddi

ಕೊಚ್ಚಿ :ಶಬರಿಮಲೆ ಅಯ್ಯಪ್ಪಸ್ವಾಮಿ  ದೇವಸ್ಥಾನಕ್ಕೆ  ತೆರಳಲು ಯತ್ನಿಸಿ ವಿಫಲರಾಗಿದ್ದ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಅವರನ್ನು ಇಂದು ಪಥನಂಥಿಟ್ಟ ಪೊಲೀಸರು ಬಂಧಿಸಿದ್ದಾರೆ.ರೆಹಾನಾ ಫಾತಿಮಾ ಅವರು ತಮ್ಮ ಫೇಸ್‌ ಬುಕ್‌ ಪೋಸ್ಟ್‌ಗಳ ಮೂಲಕ ಜನರ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಾರೆಂಬ ಆರೋಪದ ಮೇಲೆ  22ರಂದು ರೆಹನಾ ಫಾತಿಮಾ ಮೇಲೆ ದೂರು ದಾಖಲಿಸಲಾಗಿತ್ತು. ಪೊಲೀಸರು ಆರೋಪಿಯನ್ನು ಇಂದು ಬಂಧಿಸಿ  ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.