ಚಿಕ್ಕಮಗಳೂರು : ತಾಂತ್ರಿಕವಾಗಿ ಹಾಗೂ ಆಧುನಿಕವಾಗಿ ನಾವು ಎಷ್ಟೇ ಮುಂದುವರೆದರು, ಸುರಕ್ಷತೆಯ ಜ್ಞಾನದ ಕೊರತೆಯಿಂದ ಅತಿ ಹೆಚ್ಚಿನ ಅವಘಡಗಳು ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ಅಗ್ನಿ ಶಾಮಕ ದಳದ ಡಿಎಫ್‍ಓಗಳಾದ ಶಶಿಧರ ಕೆ.ಪಿ ಅಭಿಪ್ರಾಯಪಟ್ಟರು.
ಅವರು ಇಂದು ಹಾರ್ಡ್‍ವೇರ್ ಇನ್ಸ್‍ಟ್ಯೂಟ್ ಆಫ್ ಫೈರ್ ಆಂಡ್ ಸೇಪ್ಟಿ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಡಾ|| ಬಿ.ಆರ್ ಅಂಬೇಡ್ಕರ್ ರಸ್ತೆಯಲ್ಲಿರುವ ಆಭರಣ ಮಳಿಗೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 48 ನೇ ರಾಷ್ಟ್ರೀಯ ಸುರಕ್ಷತಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಂದುವರೆಯುತ್ತಿರುವ ಜಗತ್ತಿನಲ್ಲಿ ಮನುಷ್ಯ ಅತ್ಯುತ್ಸಾಹದ ಭ್ರಮಲೋಕದಲ್ಲಿ ಬದುಕುತ್ತಿದ್ದು, ಬೆಂಕಿ ಅವಘಡ, ರಸ್ತೆ ಅವಘಡ, ನೀರಿನ ಅವಘಡಗಳು ಸೇರಿದಂತೆ ಹೆಚ್ಚಿನ ಅವಘಡಗಳು ಸಂಭವಿಸುತ್ತಿವೆ. ಹಿಂದಿನ ಕಾಲದಲ್ಲಿ ಅಗಲವಾದ ರಸ್ತೆಯಾಗಲಿ, ಸಮರ್ಪಕ ರಸ್ತೆಯಾಗಲಿ ಇಲ್ಲದಿದ್ದರೂ ಅವಘಡಗಳು ಸಂಭವಿಸುವುದು ವಿರಳವಾಗಿತ್ತು. ಇಂದು ರಸ್ತೆ ಅವಘಡಗಳು ತೀರ ಸಾಮಾನ್ಯವಾಗಿವೆ. ಪ್ರತಿಯೊಬ್ಬರಿಗೂ ಸುರಕ್ಷತೆಯ ಕನಿಷ್ಠ ಜ್ಞಾನ ಇದ್ದರೆ ಎಲ್ಲಾ ರೀತಿಯ ಅವಘಡಗಳನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.
ಇದೇ ವೇಳೆ 48 ನೇ ರಾಷ್ಟ್ರೀಯ ಸುರಕ್ಷತಾ ದಿನದ ಅಂಗವಾಗಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಸಂಚಾರಿ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿಗಳಾದ ಉಮೇಶ್, ಮೌಂಟೇನ್ ವ್ಯೂ ಕಾಲೇಜಿನ ಪ್ರಾಂಶುಪಾಲರಾದ ಆಯಿಷ ಬಟುಲ್, ಕಡೂರು ಮಾರುತಿ ಕೈಗಾರಿಕ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಪುಟ್ಟಪ್ಪ, ನೋಬೆಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಬಿ. ರಕ್ಷಿತ್, ಮೂಡಿಗೆರೆ ಡಿ.ಎಸ್.ಬಿ.ಜಿ ಕಾಲೇಜಿನ ಸಹಾಯಕ ಪ್ರಾದ್ಯಾಪಕರಾದ ಅಪೂರ್ವ ಬಿ ರಾಜು, ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ನೇಮಕಾತಿ ಅದಿಕಾರಿಗಳಾದ ಎಂ.ಬಿ ಉಮೇಶ್, ಧರ್ಮಪ್ಪ, ವ್ಯಕ್ತಿತ್ವ ವಿಕಸನ ತರಬೇತುದಾರರಾದ ಅಲೇನ್ ಲೋಬೊ, ಹಾರ್ಡ್‍ವೇರ್ ಇನ್ಸ್‍ಟ್ಯೂಟ್ ಆಫ್ ಫೈರ್ ಆಂಡ್ ಸೇಪ್ಟಿ ಇಂಜಿನಿಯರಿಂಗ್ ಕಾಲೇಜ್‍ನ ಸಂಸ್ಥಾಪಕ ನಿರ್ದೇಶಕರಾದ ನಿಶ್ಚಿತ ಪೂಜಾರಿ, ಕಾಲೇಜಿನ ಪ್ರಾಂಶುಪಾಲರಾದ ಅನಿಲ್ ಹೆಚ್.ಕೆ ಮುಂತಾದವರಿದ್ದರು.
Home ಸ್ಥಳಿಯ ಸುದ್ದಿ ಸುರಕ್ಷತೆಯ ಕನಿಷ್ಠ ಜ್ಞಾನ ಇದ್ದರೆ ಎಲ್ಲಾ ರೀತಿಯ ಅವಘಡಗಳನ್ನು ತಪ್ಪಿಸಬಹುದಾಗಿದೆ: ಶಶಿಧರ ಕೆ.ಪಿ…










