ಶ್ರೀ ರಾಮುಲು ಅಂದರೆ ಕಾಂಗ್ರೆಸ್ ಪಕ್ಷದವರು ನಡಗುತ್ತಾರೆ: ಶ್ರೀ ರಾಮುಲು…

844
firstsuddi

ಕೊಪ್ಪಳ :ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಶ್ರೀ ರಾಮುಲು ಅವರು ಶ್ರೀರಾಮುಲು ಎಂಬ ವ್ಯಕ್ತಿ ಜನರ ಆಶೀರ್ವಾದ ದಿಂದ  ಬಿಜೆಪಿಯಲ್ಲಿ ಶಕ್ತಿಶಾಲಿಯಾಗಿ ಬೆಳೆದಿದ್ದಾನೆ. ರಾಮುಲು ಅಂದರೆ ಕಾಂಗ್ರೆಸ್ ಪಕ್ಷದವರು ನಡಗುತ್ತಾರೆ. ಶ್ರೀರಾಮುಲು ಪಕ್ಷ ತೊರೆಯುತ್ತಾರೆ ಎನ್ನುವುದು ಸುಳ್ಳು.ಈ ರೀತಿ ಸುಳ್ಳು ಸುದ್ದಿಗಳನ್ನು ಹರಡಿ ತೇಜೋವಧೆ ಮಾಡುವುದು ಯಾರಿಗೂ ಶೋಭೆ ತರಲ್ಲ. ಬಿಜೆಪಿಯಲ್ಲಿ ಒಬ್ಬ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿದ್ದೇನೆ. ಯಾರು ಸುಳ್ಳು ಸುದ್ದಿ ಹಬ್ಬಿಸಬಾರದು. ಜನಾರ್ದನ ರೆಡ್ಡಿ ಬಂಧನದಲ್ಲಿ  ಸಂಪೂರ್ಣ ರಾಜಕೀಯ ನಡೆದಿದೆ. ದ್ವೇಷದ ರಾಜಕಾರಣದಿಂದ  ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ ಎಂದಿದ್ದಾರೆ.