ಮಂಡ್ಯ ಜನರ ಋಣ ತೀರಿಸಲು ನಾನು ಬದ್ದಳಾಗಿರುವೆ: ಸುಮಲತಾ ಅಂಬರೀಶ್…

105
firstsuddi

ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸುಮಲತಾ ಅವರು ಹಿಂದೆ ಸರಿಯಲ್ಲಿದ್ದಾರೆ ಎಂಬ ವದಂತಿಗೆ ಸಂಬಂಧಿಸಿದಂತೆ ಸುಮಲತಾ ಅಂಬರೀಶ್ ಅವರು ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ..?
ಆತ್ಮೀಯ /ಮಾನ್ಯ
ಮಂಡ್ಯ ಜನರಲ್ಲಿ ಒಂದು ಮನವಿ.
ಮಂಡ್ಯ ಜನರ ಋಣ ತೀರಿಸಲು ನಾನು ಬದ್ದಳಾಗಿರುವೆ. ಮಂಡ್ಯ ಜನರನ್ನು ದಿಕ್ಕು ತಪ್ಪಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕುತಂತ್ರ ಮಾಡುತ್ತಿದ್ದಾರೆ. ಇನ್ನು ಮುಂದೆ ಯಾವುದೇ ಊಹಾಪೋಹದ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ.ನಿಮ್ಮ ಬೆಂಬಲ ಮತ್ತು ಆಶೀರ್ವಾದ ಸದಾ ನನ್ನೊಂದಿಗಿರಲಿ ಎಂದು ಈ ಮೂಲಕ ತಮ್ಮಲ್ಲಿ ನಾನು ಕೇಳಿಕೊಳ್ಳುತ್ತಿದ್ದೇನೆ.ನಿಮ್ಮ ಪ್ರೀತಿ ,ಕಾಳಜಿ .ಒತ್ತಾಸೆ ಬೆಂಬಲಗಳೇ ನಮಗೆ ಶ್ರೀರಕ್ಷೆ ಎಂದು ಸುಮಲತಾ ಅಂಬರೀಶ್ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.