ಬೆಂಗಳೂರು: ಜಮ್ಮು-ಕಾಶ್ಮೀರದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಹೆಚ್.ಗುರು ಅವರ ಕುಟುಂಬಕ್ಕೆ ಅರ್ಧ ಎಕರೆ ಭೂಮಿ ನೀಡಲು ಸುಮಲತಾ ಅಂಬರೀಶ್ ಅವರು ಮುಂದಾಗಿದ್ದಾರೆ.ಮಂಡ್ಯದ ದೊಡ್ಡರಸಿನಕೆರೆಯಲ್ಲಿರುವ ಜಮೀನಿನಲ್ಲಿ ಅರ್ಧ ಎಕರೆಯನ್ನು ಯೋಧ ಗುರು ಅವರ ಕುಟುಂಬಕ್ಕೆ ಹಸ್ತಾಂತರಿಸಲು ಅವರು ತೀರ್ಮಾನಿಸಿದ್ದು, ಈಗ ಅವರು ಮಗ ಅಭಿಷೇಕ್ ಅಭಿನಯದ ‘ಅಮರ್’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಕಾರಣ ಹುತಾತ್ಮ ಯೋಧ ಗುರು ಅವರನ್ನು ನೋಡಲು ಬರಲು ಸಾಧ್ಯವಾಗುತ್ತಿಲ್ಲ.ಕುಟುಂಬಕ್ಕೆ ಭೂಮಿ ಹಸ್ತಾಂತರಿಸುವ ಕುರಿತು ಅಂಬರೀಶ್ ಅವರ ಅಣ್ಣನ ಮಗ ಮದನ್ ಅವರೊಡನೆ ಚರ್ಚೆ ಮಾಡಿದ್ದೀನಿ. ಯೋಧ ಗುರು ಅವರ ಸ್ಮಾರಕ ನಿರ್ಮಾಣಕ್ಕಾಗಿ ಭೂಮಿಯನ್ನು ಹಸ್ತಾಂತರಿಸುವುದಾಗಿ ಸುಮಲತಾ ಅವರು ತಿಳಿಸಿದರು. ಆದರೆ ಸರ್ಕಾರದ ನೇತೃತ್ವದಲ್ಲೇ ಅಂತ್ಯಸಂಸ್ಕಾರ ನಡೆಯುತ್ತಿರುವ ಕಾರಣ ಯೋಧ ಗುರು ಅವರ ಕುಟುಂಬ ಈ ಭೂಮಿಯನ್ನು ವ್ಯವಸಾಯಕ್ಕೆ ಉಪಯೋಗಿಸಿಕೊಳ್ಳಲಿ. ಭಾರತಕ್ಕೆ ಆಗಮಿಸಿದ ತಕ್ಷಣ ಗುರು ಅವರ ಕುಟುಂಬವನ್ನು ಭೇಟಿಯಾಗುತ್ತೇನೆ ಎಂದು ಸುಮಲತಾ ಅವರು ತಿಳಿಸಿದ್ದಾರೆ.










