ಬುಲೆಟ್ ಬೈಕ್‌ ಮೇಲೆ ಪ್ರತ್ಯಕ್ಷವಾದ ನಗರ ಹಾವು…

321
firstsuddi

ಮಂಗಳೂರು: ಬುಲೆಟ್ ಬೈಕಿನಲ್ಲಿ ಸಂಚರಿಸುತ್ತಿದ್ದಾಗ ದಿಢೀರ್ ಬೈಕ್ ನಲ್ಲಿ ನಾಗರಹಾವು ಪ್ರತ್ಯಕ್ಷವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಮರಕಡ ನಿವಾಸಿ ಬದ್ರುದ್ದೀನ್ ಕುಳೂರು ಎಂಬುವರು ಬುಲೆಟ್ ಬೈಕ್ ನಲ್ಲಿ ಸಂಚರಿಸುತ್ತಿದ್ದಾಗ, ಹೆಡೆ ಎತ್ತುತ್ತಾ ಮರಿ ನಾಗರ ಹಾವೊಂದು ದಿಢೀರ್ ಹೊರಬಂದಿದೆ. ಗಾಬರಿಯಾದ ಬದ್ರುದ್ದೀನ್ ತಕ್ಷಣ ಬೈಕ್ ನಿಲ್ಲಿಸಿ  ಉರಗತಜ್ಞ ಗಂಗಯ್ಯ ಬೋಳಾರ್ ಎಂಬುವರಿಗೆ ಫೋನ್ ಮಾಡಿದ್ದಾರೆ.ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಗಂಗಯ್ಯ ಬೋಳಾರ್ ಅವರು  ಬೈಕ್ ಮೇಲಿದ್ದ ನಾಗರ  ಹಾವನ್ನು ಹಿಡಿದು ರಕ್ಷಿಸಿದ್ದಾರೆ.