ಪರಿಶಿಷ್ಠ ಜಾತಿ & ಪಂಗಡಗಳ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡಲು ತರಬೇತಿ ಕೇಂದ್ರವನ್ನು 100 ಕೋಟಿ ವೆಚ್ಚದಲ್ಲಿ ಕಟ್ಟಲು ಬಿಬಿಎಂಪಿಗೆ ಡಿಸಿಎಂ ಸೂಚನೆ…

168

ಬೆಂಗಳೂರು: ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಇಂದು ಛಲವಾದಿ ಮಹಾಸಭಾ ವತಿಯಿಂದ ಅಂಬೇಡ್ಕರ ಭವನದಲ್ಲಿ ಆಯೋಜಿಸಿದ್ದ ಸಂಕೀರಣದಲ್ಲಿ ಭಾಗವಹಿಸಿ ದಲಿತ ಸಮುದಾಯದ ಸಮಸ್ಯೆಗಳ ಹಾಗೂ ಮುಂದಿನ ಹಾದಿಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡಲು ತರಬೇತಿ ಕೇಂದ್ರವನ್ನು 100 ಕೋಟಿ ವೆಚ್ಚದಲ್ಲಿ ಕಟ್ಟಲು ಬಿಬಿಎಂಪಿಗೆ ಸೂಚಿಸಿದರು.