ಕಾರ್ಯಕರ್ತರ ಸಂತೋಷವೇ ನನ್ನ ಜೀವನದ ಗುರಿಯಾಗಿದೆ : ನರೇಂದ್ರ ಮೋದಿ…

194
firstsuddi

ವಾರಾಣಸಿ : ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಗೆಲುವಿಗಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ಪಕ್ಷದ ಸೂಚನೆಯನ್ನು ಪಾಲಿಸಲು ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಿದ್ದೀರಿ. ಚುನಾವಣಾ ಫಲಿತಾಂಶ ವಿಚಾರದಲ್ಲಿ ನಾನು ನಿಶ್ಚಿಂತನಾಗಿದ್ದೇನೆ. ಕಾಶಿ ಭೇಟಿ ನೀಡಿರುವುದು ನನಗೆ ಶಕ್ತಿ ಹಾಗೂ ಸಾಮರ್ಥ್ಯವನ್ನು ತಂದಿದೆ. ಲೋಕಸಭಾ ಚುನಾವಣೆಯಲ್ಲಿ ಕಾಶಿ ವಿಶ್ವರೂಪವನ್ನೇ ಪ್ರದರ್ಶಿಸಿದೆ. ಕಾಶಿಯ ಈ ವಿಶ್ವರೂಪ ಇಡೀ ದೇಶವನ್ನೇ ಸೆಳೆದಿತ್ತು. ನನ್ನನ್ನು ದೇಶದ ಜನರು ಪ್ರಧಾನಿಯಾಗಿ ಆಯ್ಕೆ ಮಾಡಿರಬಹುದು. ಆದರೆ ನಾನು ನಿಮ್ಮೆಲ್ಲರಂತೆ ಓರ್ವ ಕಾರ್ಯಕರ್ತ. ಕಾರ್ಯಕರ್ತರ ಸಂತೋಷವೇ ನನ್ನ ಜೀವನದ ಗುರಿಯಾಗಿದೆ ಎಂದು ಹೇಳಿದರು.