ಚಿಕ್ಕಮಗಳೂರು:ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬಹುದು, ಸ್ಪಂದಿಸದೆ ಇರಬಹುದು ಹೋರಾಟ ಮಾಡಿ ನಮ್ಮ ಹಕ್ಕುಗಳನ್ನು ಪಡೆಯುವಾಗ ವಿಳಂಬವಾಗಬಹುದು. ಜಾಣ್ಮೆಯಿಂದ, ತಾಳ್ಮೆಯಿಂದ ನಿಮ್ಮನ್ನ ನಂಬಿ ಪದಾಧಿಕಾರಿಗಳನ್ನಾಗಿ ಮಾಡಿದವರಿಗೆ ಅವರಿಗೆ ನಂಬಿಕೆ ಬರುವ ರೀತಿಯಲ್ಲಿ ಹೋರಾಟ ಮಾಡಿಕೊಂಡು ಹೋಗುವ ಗುಣಗಳನ್ನು ಮುಖಂಡರು ಬೆಳೆಸಿಕೊಳ್ಳಬೇಕೆಂದು ವಿಧಾನ ಪರಿಷತ್ ಶಾಸಕರಾದ ಎಸ್.ಎಲ್ ಭೋಜೆಗೌಡರವರು ಕರೆ ನೀಡಿದರು.
ಅವರು ಭಾನುವಾರ ದಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳ ನೌಕರರ ಸಂಘ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯಾವುದೇ ಸಂಘದ ಯಾವುದೇ ಹುದ್ದೆಯನ್ನು ಹೊಂದಿದವರು ನಿಮ್ಮನ್ನು ಪದಾಧಿಕಾರಿಗಳನ್ನಾಗಿ ಮಾಡಿದ ಸಂಘಟನೆಯ ಹಿತ ಕಾಯುವ ಜವಾಬ್ದಾರಿ ಪದಾಧಿಕಾರಿಗಳ ಮೇಲಿರುತ್ತದೆ. ಇಂತಹ ಜವಾಬ್ದಾರಿ ನಿರ್ವಹಿಸಬೇಕಾದರೆ ಪದಾಧಿಕಾರಿಗಳಿಗೆ ಹೋರಾಟದ ಮನೋಭಾವ ಮತ್ತು ಅವರ ಬೇಡಿಕೆಗಳ ಈಡೇರಿಸಿ ಅವರ ವಿಶ್ವಾಸಗಳಿಸುವ ಕೆಲಸವನ್ನು ಮೊದಲು ಸಂಘಟನಕಾರರು ಮಾಡಬೇಕು. ಆ ಶಕ್ತಿ ನಿಮ್ಮಲ್ಲಿರಬೇಕು. ಆ ಶಕ್ತಿಯನ್ನು ತುಂಬುವ ಕೆಲಸ ನಾನು ಮಾಡುತ್ತೇನೆ ಎಂದು ಹೇಳಿದರು.ಕೆಲವೊಮ್ಮೆ ನಮಗೆ ತನ್ನಿಂದ ತಾನೇ ಸಿಗುವಂತ ಸೌಲಭ್ಯಗಳನ್ನು ಹೋರಾಟ ಮಾಡಿ ಪಡೆಯಬೇಕಾದ ಅನಿವಾರ್ಯತೆ ಇರುತ್ತದೆ. ನಮಗೆ ಹಕ್ಕುಗಳಿದ್ದರು ಹಕ್ಕುಗಳಿಂದ ವಂಚಿತರಾಗಿರುವ ನಿದರ್ಶನಗಳು ನಮ್ಮ ಸಮಾಜದಲ್ಲಿವೆ. ಹಕ್ಕುಗಳಿಂದ ವಂಚಿತರಾಗಿರುವ ಸಂದರ್ಭದಲ್ಲಿ ಇಂತಹ ಹೋರಾಟಗಳಿಂದಷ್ಟೇ ಹಕ್ಕುಗಳನ್ನು ಪಡೆಯಲು ಸಾಧ್ಯ. ಈ ಪ್ರಜಾಪ್ರಭುತ್ದ ವ್ಯವಸ್ಥೆಯಲ್ಲಿ ನಮ್ಮ ಹಕ್ಕುಗಳಿದ್ದರು ಕೂಡ, ಹಕ್ಕುಗಳನ್ನು ಕಳೆದುಕೊಂಡು ಹೋರಾಟ ಮಾಡುತ್ತಿರುವ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಹಾಗೆಂದು ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂಧಿಸಬಹುದು, ಸ್ಪಂಧಿಸದೆ ಇರಬಹುದು ಹೋರಾಟ ಮಾಡಿ ನಮ್ಮ ಹಕ್ಕುಗಳನ್ನು ಪಡೆಯುವಾಗ ವಿಳಂಬವಾಗಬಹುದು. ಜಾಣ್ಮೆಯಿಂದ, ತಾಳ್ಮೆಯಿಂದ ನಿಮ್ಮನ್ನ ನಂಬಿ ಪದಾಧಿಕಾರಿಗಳನ್ನಾಗಿ ಮಾಡಿದವರಿಗೆ ಅವರಿಗೆ ನಂಬಿಕೆ ಬರುವ ರೀತಿಯಲ್ಲಿ ಹೋರಾಟ ಮಾಡಿಕೊಂಡು ಹೋಗುವ ಗುಣಗಳನ್ನು ಮುಖಂಡರು ಬೆಳೆಸಿಕೊಳ್ಳಬೇಕು. ಹೋರಾಟದ ಸಂದರ್ಭದಲ್ಲಿ ನಾವು ಆಸಕ್ತಿಯನ್ನೆ ಕಳೆದುಕೊಳ್ಳುತ್ತೇವೆ. ಆಸಕ್ತಿಯನ್ನು ಕಳೆದುಕೊಳ್ಳಬಾರದು ಹಾಗೂ ಹೋರಾಟದಲ್ಲಿ ದೃಡ ವಿಶ್ವಾಸವಿಟ್ಟುಕೊಳ್ಳಬೇಕು. ಅನೇಕ ವರ್ಷಗಳಿಂದ ಸಂಘಟನೆಯಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದಿರಾ. ಅನೇಕ ಹೋರಾಟಗಳಲ್ಲಿ ಕೆಲವೊಂದು ಫಲಪ್ರದವಾಗಿರುವುದಿಲ್ಲ, ಫಲಪ್ರದವಾಗಿಲ್ಲವೆಂದ ಮಾತ್ರಕ್ಕೆ ಹೋರಾಟವನ್ನು ಕೈ ಬಿಡುದಲ್ಲ ಎಂದು ಹೇಳಿದರು
ವಸತಿ ಶಾಲೆಯನ್ನು ಸಂಸ್ಥೆಯಿಂದ ಸರ್ಕಾರಕ್ಕೆ ವಹಿಸಿಕೊಳ್ಳಬೇಕೆಂದು ಹೋರಾಟ ಮಾಡುತ್ತಿದ್ದಿರಾ. ಇದು ದೊಡ್ಡ ವಿಚಾರವಲ್ಲ. ಹೆಚ್.ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ ನಂತರ ಕಲವಾರು ಶಾಲಾ ಕಾಲೇಜುಗಳನ್ನು ಸ್ಥಾಪಿಸಿರುವುದಲ್ಲದೆ, ಅವುಗಳಿಗೆ ಆರ್ಥಿಕ ಸ್ವಾವಲಂಭನೆಯನ್ನು ನೀಡಿದ್ದಾರೆ. ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕಲಿಯುವಂತಾಗಬೇಕು. ಅಲ್ಲದೆ ವಸತಿ ಶಾಲೆಗಳಲ್ಲಿ ಶಿಕ್ಷಕರು ಸಹ ಮುಕ್ತ ಮನಸ್ಸಿನಿಂದ, ಮನಶಾಂತಿಯಿಂದ ಕರ್ತವ್ಯ ನಿರ್ವಹಿಸುವಂತಾಗಬೇಕೆನ್ನುವುದು ಸರ್ಕಾರದ ಉದ್ದೇಶವಾಗಿದೆ. ನಿಮ್ಮ ಸಮಸ್ಯೆಗಳಿಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಸಕರಾತ್ಮಕವಾಗಿ ಸ್ಪಂಧಿಸುತ್ತಾರೆನ್ನುವ ಆಶಾಭಾವನೆ ನನ್ನಲ್ಲಿದೆ. ಶಿಕ್ಷಣ ನೀಡುವ ನೀವುಗಳು ಶಿಕ್ಷಣಾ ಇಲಾಖೆಯಲ್ಲೆ ಇದ್ದರೆ ಉತ್ತಮ. ಶಿಕ್ಷಣಾ ಇಲಾಖೆಯಲ್ಲೆ ಸರ್ಕಾರಿ ಅಧಿಕಾರಿಗಳಿಗೆ ನೀಡುವ ಸೌಲಭ್ಯಗಳನ್ನು ನಿಮಗೆ ನೀಡಿದರೆ ಉತ್ತಮವಾಗುತ್ತದೆ. ವಸತಿ ಶಾಲೆಗಳಾಗಿರುವುದರಿಂದ ವಿದ್ಯಾರ್ಥಿಗಳ ಮಾನಸಿಕ ಹಾಗೂ ಬೌದ್ಧಿಕ ಅಭಿವೃದ್ದಿಯಲ್ಲದೆ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವ ಜವಾಬ್ದಾರಿ ಇಲ್ಲಿನ ಶಿಕ್ಷಕರು, ಪ್ರಾಂಶುಪಾಲರು ಮತ್ತು ಬೋಧಕೇತರ ಸಿಬ್ಬಂದಿಗಳಾದ್ದಾಗಿದೆ. ಶಿಕ್ಷಕರು, ಪ್ರಾಂಶುಪಾಲರು ಮತ್ತು ಬೋಧಕೇತರ ಸಿಬ್ಬಂದಿಗಳು ಸೇವೆಗೆ ಸೇರಿದ ದಿನಾಂಕದಿಂದ ಅನೇಕ ವೃತ್ತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಬಳಿ ಭೇಟಿಗೆ ಅವಕಾಶ ನೀಡಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಪ್ರಾಸ್ತವಿಕವಾಗಿ ಮಾತಾಡಿದ ಕರ್ನಾಟಕ ರಾಜ್ಯ ವಸತಿ ಶಾಲೆಗಳ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ನಟರಾಜ್ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಡಾ.ಬಿ.ಆರ್.ಅಂಬೇಡ್ಕರ್, ಇಂದಿರಾ ಗಾಂಧಿ ವಸತಿ ಶಾಲಾ, ಕಾಲೇಜುಗಳಲ್ಲಿ ಸುಮಾರು 1.6 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಸತಿ ಶಾಲೆಗಳಿಗೆ 2011-12ನೇ ಸಾಲಿನಿಂದ ಖಾಯಂ ಸಿಬ್ಬಂದಿಗಳಾಗಿ ನೇಮಕಗೊಂಡು ಕಳೆದ 7 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸುಮಾರು 4200 ಖಾಯಂ ಶಿಕ್ಷಕರು, ಪ್ರಾಂಶುಪಾಲರು ಮತ್ತು ಬೋಧಕೇತರ ಸಿಬ್ಬಂದಿಗಳು ಸೇವೆಗೆ ಸೇರಿದ ದಿನಾಂಕದಿಂದ ಅನೇಕ ವೃತ್ತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಸತಿ ಶಾಲೆಗಳ ಸಿಬ್ಬಂದಿಗಳ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ, ವಸತಿ ಶಾಲೆಗಳ ವಿದ್ಯಾರ್ಥಿಗಳ ಬಗ್ಗೆ ಮತ್ತು ಶಿಕ್ಷಕರ ಬಗ್ಗೆ ಅಪಾರ ಕಾಳಜಿಯಿರುವ ತಾವು ವಸತಿ ಶಾಲಾ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ನಮ್ಮ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಹೇಳಿದರು.
ವೇದಿಕೆಯಲ್ಲಿ ಕನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳ ನೌಕರರ ಸಂಘದ ರಾಜ್ಯಧ್ಯಕ್ಷರಾದ ಮಹೇಶ್ ಚಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಬಾಬು, ರಾಜ್ಯ ಸಂಘಟನಾ ಕಾರ್ಯದರ್ಶಿ ಲಕ್ಷ್ಮಿ ಶೆಟ್ಟಿ, ಜಿಲ್ಲಾಧ್ಯಕ್ಷರಾದ ನಾಗರಾಜು, ಜಿಲ್ಲಾ ಉಪಾಧ್ಯಕ್ಷರಾದ ದೀಪಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಟಿ.ವಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಜಿಲ್ಲಾ ಖಜಾಂಚಿ ವಿಜಯ್‍ಕುಮಾರ್ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಪದಾಧಿಕಾರಿಗಳನ್ನಾಗಿ ಮಾಡಿದವರಿಗೆ ನಂಬಿಕೆ ಬರುವ ರೀತಿಯಲ್ಲಿ ಉತ್ತಮ ಗುಣಗಳನ್ನು ಮುಖಂಡರು ಬೆಳೆಸಿಕೊಳ್ಳಬೇಕು: ಎಸ್.ಎಲ್ ಭೋಜೆಗೌಡ …










