ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರು ರೌಡಿಶೀಟರ್ ಗಳನ್ನು ಕೊಲೆ ಮಾಡಿರುವ ಘಟನೆ ಕೋಣನುಕುಂಟೆ ವಿವರ್ಸ್ ಕಾಲೋನಿಯಲ್ಲಿ ನಡೆದಿದೆ.ಮುರುಗನ್ ಹಾಗೂ ಪಳನಿ ಕೊಲೆಯಾದ ರೌಡಿಶೀಟರ್ಗಳು. ಬಿಟಿಎಸ್ ಮಂಜ, ಮುರುಗ ಹಾಗೂ ಪಳನಿ ರೌಡಿಶೀಟರ್ಗಳಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ಪಳನಿ ಮಗಳ ಹುಟ್ಟುಹಬ್ಬದ ಪಾರ್ಟಿ ನಡೆದಿತ್ತು. ಪಳನಿ ತನ್ನ ಎಲ್ಲಾ ಸ್ನೇಹಿತರನ್ನು ಪಾರ್ಟಿಗೆ ಆಹ್ವಾನಿಸಿದ್ದ ಆದರೆ ಮಂಜನ ಗ್ಯಾಂಗ್ ನನ್ನು ಆಹ್ವಾನಿಸಿರಲಿಲ್ಲ. ಹಾಗೂ ಹಳೆಯ ದ್ವೇಷದ ಹಿನ್ನಲೆ ತಡರಾತ್ರಿ ಪಳನಿ ಹಾಗೂ ಮುರುಗನ್ ಬಾರ್ ನಲ್ಲಿ ಮದ್ಯಪಾನ ಮಾಡಿ ಮನೆಗೆ ತೆರಳುತ್ತಿದ್ದ ವೇಳೆ ಬಿಟಿಎಸ್ ಮಂಜನ 8 ಜನರ ಗ್ಯಾಂಗ್ ಆಟೋದಲ್ಲಿ ಬಂದು ದಾಳಿ ನಡೆಸಿದ್ದಾರೆ. ಲಾಂಗ್ಗಳಿಂದ ಕೊಚ್ಚಿ ನಡುರಸ್ತೆಯಲ್ಲೆ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










