ಶಾಲಾ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ…

458
firstsuddi

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ 68ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ತಮ್ಮ ಹುಟ್ಟುಹಬ್ಬವನ್ನು ವಾರಣಸಿ ಕ್ಷೇತ್ರದ ಶಾಲಾ ಮಕ್ಕಳೊಂದಿಗೆ ಸರಳವಾಗಿ ಆಚರಿಸಿಕೊಳ್ಳಲಿದ್ದಾರೆ. ಇಂದು ನರೇಂದ್ರ ಮೋದಿಯವರು ಮೊದಲು ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ವಾರಾಣಸಿಯ ಶಾಲಾ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡು, ಬಳಿಕ ತಮ್ಮ ಜೀವನದ 35 ನಿಮಿಷದ `ಚಲೋ ಜೀತೆ ಹೈನ್’ ಕಿರುಚಿತ್ರವನ್ನು ಮಕ್ಕಳೊಂದಿಗೆ ವೀಕ್ಷಿಸಲಿದ್ದಾರೆ ಎನ್ನಲಾಗಿದ್ದು, ವಾರಣಸಿಯಿಂದ ಗುಜರಾತ್‍ನ ಗಾಂಧಿನಗರಕ್ಕೆ ತೆರಳಲಿರುವ ಮೋದಿ ಅವರು ತಮ್ಮ ತಾಯಿ ಹಿರಾಬೆನ್ ಅವರ ಆಶೀರ್ವಾದ ಪಡೆಯಲಿದ್ದಾರೆ. ಪ್ರಧಾನಿ ಮೋದಿಯವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಹಣಕಾಸು ಸಚಿವ ಅರುಣ್ ಜೇಟ್ಲಿ, ಕಾಂಗ್ರೆಸ್  ಸೇರಿ ಹಲವು ಗಣ್ಯ ವ್ಯಕ್ತಿಗಳು ಟ್ವಿಟ್ಟರ್ ನಲ್ಲಿ ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ.