ಚಿಕ್ಕಮಗಳೂರು : ಪಂಚ ಕ್ಷೇತ್ರದ ಉಪ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಶಾಸಕ ಸಿಟಿ ರವಿಯವರು ಅಧಿಕಾರ, ಹಣದ ನಡುವೆ ಬಿಜೆಪಿ ಪಕ್ಷ ಪಂಚ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿದೆ. ಬಿಜೆಪಿ ಪಕ್ಷ ನೈತಿಕವಾಗಿ ಗೆದ್ದಿದೆ. ಬಿಜೆಪಿಗೆ ಮುಂಬರುವ ಲೋಕಸಭಾ ಚುನಾವಣೆಯ ಹೋರಾಟಕ್ಕೆ ಇದು ಪ್ರೇರಣೆಯಾಗಿದೆ.ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಅವರು ಚುನಾವಣೆ ಕಣದಿಂದ ಹಿಂದೆ ಹೋಗುವ ಮೂಲಕ ಬಿಜೆಪಿಗೆ ಅವಮಾನ ಮಾಡಿದ್ದಾರೆ. ಇದರ ನಡುವೆಯೂ ರಾಮನಗರದಲ್ಲಿ ಬಿಜೆಪಿ ತನ್ನ ಶಕ್ತಿ ಪ್ರದರ್ಶನ ತೋರಿದೆ. ಪಕ್ಷದ ಸಿದ್ದಾಂತ ಹೊಂದಿದವರಿಗೆ ಟಿಕೆಟ್ ನೀಡುವುದು ನಮಗೆ ಒಂದು ಪಾಠ ಅನ್ನೋದನ್ನು ಈ ಚುನಾವಣೆ ಕಲಿಸಿದೆ.ಉಪ ಚುನಾವಣೆಯ ಫಲಿತಾಂಶ ಮುಂಬರುವ ಯಾವುದೇ ಚುನಾವಣೆಗೆ ದಿಕ್ಸೂಚಿ ಅಲ್ಲ.ಪಕ್ಷ ಸಂಘಟನ್ಮಾತಕವಾಗಿ ಬೆಳೆಯುಲು ಇದು ಒಂದು ವೇದಿಕೆಯಾಗಿದೆ ಎಂದಿದ್ದಾರೆ.










