ಚಿಕ್ಕಮಗಳೂರು: ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ 3000 ಅಡಿಗಳಷ್ಟು ಎತ್ತರದ ಬೆಟ್ಟದಲ್ಲಿ ಪೂಜಿಸಲ್ಪಡೋ ದೇವಿರಮ್ಮನನ್ನು ನೋಡಲು ಸಾವಿರಾರು ಭಕ್ತರು ಮಧ್ಯರಾತ್ರಿಯಿಂದಲೇ ಬರಿಗಾಲಲ್ಲೇ ಬೆಟ್ಟವೇರಿ ದೇವಿರಮ್ಮ ದರ್ಶನ ಪಡೆದಿದ್ದು, ವರ್ಷಕೊಮ್ಮೆ ದೇವಿರಮ್ಮ ಬೆಟ್ಟದಲ್ಲಿ ದೇವಿ ದರ್ಶನ ನೀಡೋದು, ಈ ಹಿನ್ನೆಲೆ ರಾತ್ರಿಯಿಂದಲೇ ದೇವಿಯ ದರ್ಶನಕ್ಕಾಗಿ ಜನಸಾಗರವೇ ಹರಿದು ಬಂದಿತ್ತು. ದೇವಿಯ ದರ್ಶನ ಪಡೆಯಲು ಭಕ್ತರು ಗುಡ್ಡಗಾಡು, ಕಾಡು ಮೇಡುಗಳಲ್ಲಿ ಬರಿಗಾಲಿನಲ್ಲಿ ತೆರಳಿ ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ.ಇನ್ನು ದೇವಿಯ ದರ್ಶನಕ್ಕಾಗಿ ಮುಗಿಬಿದ್ದ ಭಕ್ತರು ತಾವು ತಂದಿದ್ದ ಕಟ್ಟಿಗೆ, ತುಪ್ಪ, ಸೀರೆಯನ್ನು ದೇವಿಗೆ ಒಪ್ಪಿಸಿದ್ದಾರೆ.
ಇನ್ನು ಇಲ್ಲಿ ಮತ್ತೊಂದು ವಿಶೇಷ ಅಂದ್ರೆ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಜಿಲ್ಲೆಯಾದ್ಯಂತ ಮನೆಗಳಲ್ಲಿ ದೀಪ ಬೆಳಗಿಸಿ ಆನಂತರ ದೀಪಾವಳಿಯನ್ನು ಆಚರಿಸೋದು. 3000 ಅಡಿಗಳಷ್ಟು ಎತ್ತರ ಗುಡ್ಡದಲ್ಲಿರೋ ದೇವಿರಮ್ಮ ವರ್ಷಗೊಮ್ಮೆ ಮಾತ್ರ ಜನರಿಗೆ ದರ್ಶನ ನೀಡೋದು ಇಲ್ಲಿನ ವಿಶೇಷವಾಗಿದೆ. ಈಗಾಗಲೇ 60 ಸಾವಿರಕ್ಕೂ ಹೆಚ್ಚು ಭಕ್ತರು ದೇವಿರಮ್ಮ ದರ್ಶನ ಪಡೆದಿದ್ದಾರೆ. ಇನ್ನು ಸಂಜೆವರೆಗೂ ಸಾವಿರಾರು ಭಕ್ತರು ದೇವಿರಮ್ಮ ದರ್ಶನ ಪಡೆಯಲಿದ್ದಾರೆ…










