ಬೆಂಗಳೂರು: ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಮೈತ್ರಿ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದಕ್ಕೆ ಕ್ಷೇತ್ರದ ಜನತೆಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಹಾಗೂ ಶ್ರೀರಾಮುಲು ಅಣ್ಣನವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣೆ ಶಾಂತವಾಗಿ ನಡೆಯಲು ಶ್ರೀರಾಮುಲು ಸಹಕರಿಸಿದ್ದಾರೆ. ನಾವು ಗೆಲ್ಲಬಹುದು.ಅಥವಾ ಅವರು ಸೋಲಬಹುದು. ಅದು ಮುಖ್ಯ ಅಲ್ಲ. ಆದರೆ ನಮ್ಮಿಂದ ಕಾರ್ಯಕರ್ತರಿಗೆ ತೊಂದರೆ ಆಗಿಲ್ಲ. ಬಳ್ಳಾರಿ ಅಭಿವೃದ್ಧಿ ವಿಚಾರದಲ್ಲಿ ದೊಡ್ಡ ಸವಾಲುಗಳು ಇವೆ.ಉಗ್ರಪ್ಪನವರು ಪಾರ್ಲಿಮೆಂಟ್ ನಲ್ಲಿ ನಮ್ಮ ಪರ ಕೆಲಸ ಮಾಡ್ತಾರೆ .ಈ ಗೆಲುವನ್ನು ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೆ ಸಲ್ಲಿಸಲು ಬಯಸುತ್ತೇನೆ. ನಾವು ಗೆದ್ದಿರುವುದಕ್ಕೆ ಹಿಗ್ಗುವುದಿಲ್ಲ ಎಂದಿದ್ದಾರೆ.











