ಮಂಡ್ಯ : ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡಲು ಜೋಡೆತ್ತುಗಳು ಬರುವುದಾಗಿ ಹೇಳಿದ್ದಾರೆ. ಆ ಜೋಡೆತ್ತುಗಳು ರೈತರ ಹೊಲ ಹೂಳಲು ಬರುತ್ತಿಲ್ಲ. ನೀವು ಬೆಳೆದ ಬೆಳೆಯನ್ನು ಅರ್ಧರಾತ್ರಿಯಲ್ಲಿ ತಿಂದು ಹೋಗಲು ಜೋಡೆತ್ತುಗಳು ಬರುತ್ತಿವೆ. ಅಂತಹ ಜೋಡೆತ್ತುಗಳು ನಿಮಗೆ ಬೇಕೆ? ರೈತರ ಮುಗ್ದತೆ, ಪ್ರಾಮಾಣಿಕತೆ ಜೊತೆಗೆ ಚೆಲ್ಲಾಟವಾಡಲು ಬಂದಿಲ್ಲ. ಅವರ ಪ್ರಾಮಾಣಿಕತೆಗೆ ಗೌರವ ಕೊಡುತ್ತೇವೆ. ಡಿ. ಕೆ. ಶಿವಕುಮಾರ್ ಹಾಗೂ ನಾನು ನಿಜವಾದ ಜೋಡೆತ್ತುಗಳು. ರಾಜ್ಯದ ಸಮಗ್ರ ಅಭಿವೃದ್ದಿಗೆ ನಾವಿದ್ದೇವೆ ಎಂದಿದ್ದಾರೆ.










