ಸಿದ್ದರಾಮಯ್ಯ ಮತ್ತು ಸದಾನಂದಗೌಡರ ನಡುವೆ ಟ್ವಿಟ್ಟರ್ ಫೈಟ್…

324
firstsuddi

ಬೆಂಗಳೂರು :ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ, ಹಾಗಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ಕರ್ನಾಟಕದಲ್ಲಿಯೇ ಬಂದು ಮನೆ ಮಾಡಿದ್ರೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದ ಜನ ಬೆಂಬಲ ನೀಡುವುದಿಲ್ಲ. ಎಂದು ಟ್ವಿಟ್ ಮಾಡಿದ್ದರು.

 

ಇದಕ್ಕೆ ಡಿ ವಿ ಸದಾನಂದಗೌಡ  ಅವರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಅವರೇ   ಅದೇ ರಿಕಾರ್ಡ್ ಕಂಠ ಪಾಠ ಮಾಡಿಕೊಂಡು ಎಷ್ಟು ದಿನ ಸುತ್ತಬೇಕು ಅಂತ ಇದ್ದೀರಾ. ಚಾಮುಂಡೇಶ್ವರಿಯ ಮತದಾರರೇ ನಿಮ್ಮನ್ನು ನಂಬಲಿಲ್ಲ. ಇನ್ನು ಕರಾವಳಿಯ ಜನ ನಿಮ್ಮ ಕಂಠ ಪಾಠ ಒಪ್ತಾರಾ ? ಕರಾವಳಿಯ ಯಾಕೆ ಇಡೀ ಕರ್ನಾಟಕದ ಜನರಿಗೆ ತಮ್ಮ ಆಯ್ಕೆ ಗೊತ್ತಿದೆ . ಇನ್ನು ಅಧಿಕಾರ ಹೊಂದಾಣಿಕೆ ನಿಮ್ಮ ಬಹುಮತಕ್ಕೆ ಬಂದದ್ದಲ್ಲ ನೆನಪಿರಲಿ ಎಂದು ಟ್ವಿಟ್ ಮಾಡಿದ್ದಾರೆ. 

ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ಅವರು ಶ್ರೀ ಸದಾನಂದಗೌಡರೇ ಕರಾವಳಿ ಯಾಕೆ ಇಡೀ ಕರ್ನಾಟಕದ ಜನರಿಗೆ ತಮ್ಮ ಆಯ್ಕೆ ಗೊತ್ತಿದೆ..” ಎಂದು ಕರೆಕ್ಟಾಗಿ ಹೇಳಿದ್ದೀರಿ. ನೀವು ಉಡುಪಿ -ಪುತ್ತೂರು ಬಿಟ್ಟು ಬೆಂಗಳೂರಿಗೆ ಬಂದು ಸೇರಿಕೊಂಡಿದ್ದು ಕರಾವಳಿಯವರಿಗೆ ಖಂಡಿತ ಗೊತ್ತಿದೆ. ಜೆಡಿ(ಎಸ್) ಜತೆ ಸೇರ್ಕೊಂಡು ಸರ್ಕಾರ ರಚನೆ ಮಾಡಿದಾಗ ನಿಮ್ಮ‌ ಪಕ್ಷಕ್ಕೆ ಬಹುಮತ ಇತ್ತಾ ಗೌಡ್ರೆ? ಎಂದು ಟ್ವಿಟ್ ಮಾಡಿದ್ದಾರೆ.