ಕಡೂರು: ಅಕ್ರಮ ಸಂಬಂಧ ಹಿನ್ನೆಲೆ ಪತಿ ಗುಂಡು ಹಾರಿಸಿ ಪತ್ನಿಯ ಕೊಲೆ…

324
firstsuddi

ಕಡೂರು: ಪತ್ನಿಯ ಅಕ್ರಮ ಸಂಬಂಧ ಶಂಕಿಸಿ ಪತಿಯೇ ಪತ್ನಿಯನ್ನು ಗುಂಡು ಹಾರಿಸಿ ಕೊಂದಿರುವ ಘಟನೆ ಕಡೂರು ತಾಲೂಕಿನ ಕಂಚುಗಾರನಹಳ್ಳಿಯಲ್ಲಿ ನಡೆದಿದೆ. ಜಯಮ್ಮ(55)ಕೊಲೆಯಾದ ಮಹಿಳೆ. ಬಸವರಾಜಪ್ಪ ಆರೋಪಿ ಎನ್ನಲಾಗಿದ್ದು, ಈತ ಜಯಮ್ಮಳಿಂದ  30 ವರ್ಷಗಳಿಂದ ಪರಸ್ಪರ ಸಂಪರ್ಕ ಕಳೆದುಕೊಂಡಿದ್ದು,  ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತು ಜಯಮ್ಮಳ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿ ಬಳಿಕ ಬಸವರಾಜಪ್ಪ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.