ಬೆಂಗಳೂರು: ಅಪಾರ್ಟ್ಮೆಂಟ್ನಿಂದ ಬಿದ್ದು ಖಾಸಗಿ ಕಂಪನಿ ಇಂಜಿನಿಯರ್ ಮೃತಪಟ್ಟ ಘಟನೆ ನಿನ್ನೆ ನಗರದ ಕೆಆರ್ ಪುರ ಬಳಿಯ ಕೊಡಿಗೇಹಳ್ಳಿಯಲ್ಲಿ ನಡೆದಿದೆ.
ಮೃತನನ್ನು ದಿಪಾಂಶು ಶರ್ಮಾ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಕಂಠ ಪೂರ್ತಿ ಕುಡಿದು ಪಾರ್ಟಿ ಮಾಡಿ ನಿನ್ನೆ ಬೆಳಗ್ಗೆ 6:45ರ ವೇಳೆ ತನ್ನ ಮನೆಗೆ ಹಿಂತಿರುಗಿದ್ದ ದಿಪಾಂಶು ಶರ್ಮಾ, ತನ್ನ ಅಪಾರ್ಟ್ಮೆಂಟ್ನ 33ನೇ ಫ್ಲೋರ್ನ ಬಾಲ್ಕನಿಗೆ ತೆರಳಿದ್ದಾರೆ. ಈ ವೇಳೆ ಮದ್ಯದ ನಶೆಯಲ್ಲೇ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










