ಅಮರಾವತಿಯೇ ಆಂಧ್ರ ಪ್ರದೇಶದ ರಾಜಧಾನಿ ಎಂದು ತೀರ್ಪು ನೀಡಿದ ಹೈಕೋರ್ಟ್.

75
firstsuddi

ಅಮರಾವತಿ : ಅಮರಾವತಿಯೇ ಆಂಧ್ರ ಪ್ರದೇಶದ ರಾಜಧಾನಿ. ಇದೇ ಅಂತಿಮ ಎಂದು ಆಂಧ್ರ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಮೂರು ರಾಜಧಾನಿಗಳನ್ನು ಹೊಂದುವ ಆಶಯವಿತ್ತು. ಅಮರಾವತಿ ಶಾಸಕಾಂಗ ರಾಜಧಾನಿ, ವಿಶಾಖಪಟ್ಟಣಂ ಕಾರ್ಯಾಂಗ ರಾಜಧಾನಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿ ಆಗಬೇಕೆಂದು ರಾಜ್ಯ ಸರ್ಕಾರ ಬಯಸಿತ್ತು. ಆದರೆ ಒಂದು ರಾಜ್ಯಕ್ಕೆ ಮೂರು ರಾಜಧಾನಿಗಳಿರಲು ಸಾಧ್ಯವಿಲ್ಲ ಎಂದು ಆಂಧ್ರ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಆಂಧ್ರಪ್ರದೇಶ ರಾಜಧಾನಿ ವಿಚಾರದಲ್ಲಿ ನಡೆಯುತ್ತಿದ್ದ ಹಗ್ಗ ಜಗ್ಗಾಟಕ್ಕೆ ಇತಿಶ್ರೀ ಹಾಡಿದೆ.

ಮೂರು ರಾಜಧಾನಿ ಮತ್ತು ಸಿಆರ್​ಡಿಪಿ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಪೀಠ, ಸಿಆರ್ ಡಿಪಿ ಕಾಯ್ದೆ ಪ್ರಕಾರವೇ ಸರ್ಕಾರ ಆಡಳಿತ ನಡೆಸಬೇಕು. ಪ್ರಣಾಳಿಕೆಯಲ್ಲಿ ನೀಡಿದಂತೆ 6 ತಿಂಗಳಲ್ಲಿ ಅಮರಾವತಿ ಅಭಿವೃದ್ಧಿಗೊಳಿಸಬೇಕು. ಭೂಮಿ ನೀಡಿದ ರೈತರಿಗೆ 3 ತಿಂಗಳಲ್ಲಿ ಪರ್ಯಾಯ ಭೂಮಿ ನೀಡಿ ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ. ಅಲ್ಲದೇ, ಅಮರಾವತಿ ರಾಜಧಾನಿ ಮಾಡಲು ಭೂಮಿ ನೀಡಿದ ರೈತರಿಗೆ ಮೂಲಸೌಕರ್ಯ ಒದಗಿಸಿದ ನಿವೇಶನಗಳನ್ನು ನೀಡಬೇಕು. ಅಧೀನಕ್ಕೆ ಪಡೆದ ಭೂಮಿಯನ್ನು ರಾಜಧಾನಿ ಅಭಿವೃದ್ಧಿಗಾಗಿ ಮಾತ್ರ ಬಳಕೆ ಮಾಡಬೇಕು. ಈ ಬಗ್ಗೆ ಕಾಲಕಾಲಕ್ಕೆ ಕೋರ್ಟ್ಗೆ ಸರ್ಕಾರ ಮಾಹಿತಿ ನೀಡಬೇಕು ಎಂದು ಸೂಚಿಸಿದೆ.