ಆ ಮಹಿಳೆಯಿಂದ ಸ್ತ್ರೀ ಕುಲಕ್ಕೆ ಅಪಮಾನ ಆಗಿದೆ : ರೇಣುಕಾಚಾರ್ಯ.

110
Firstsuddi

ಬೆಂಗಳೂರು : ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೋದಲ್ಲಿರುವ ಮಹಿಳೆಯಿಂದ ಸ್ತ್ರೀ ಕುಲಕ್ಕೆ ಅಪಮಾನ ಆಗಿದೆ ಎಂದು ಶಾಸಕ ರೇಣುಕಾಚಾರ್ಯ ಅವರು ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರು ಸಲ್ಲಿಸಿರುವ ದಿನೇಶ್ ಕಲ್ಲಹಳ್ಳಿ ಅವರನ್ನು ಬಂದಿಸುವಂತೆ ಸಿಎಂ ಮತ್ತು ಗೃಹ ಸಚಿವರ ಬಳಿ ಮನವಿ ಮಾಡಿಕೊಂಡಿದ್ದೇವೆ. ದೂರು ಕೊಟ್ಟ ವ್ಯಕ್ತಿಗೂ ಮತ್ತು ಮಹಿಳೆಗೆ ಏನು ಸಂಬಂಧ? ಪ್ರಕರಣದ ಹಿಂದೆ ದುಡ್ಡು ಚೆಲ್ಲುತ್ತಿರೋರ ಬಗ್ಗೆ ತಿಳಿಯಬೇಕಿದೆ. ಆ ವ್ಯಕ್ತಿಗೆ ಸಿಡಿ ಮಾಡಲು ಪ್ರಚೋದನೆ ನೀಡಿದವರು ಯಾರು? ವೀಡಿಯೋದಲ್ಲಿ ಸಂಭಾಷಣೆ ಗಮನಿಸಿದ್ರೆ ಇದು ಲೈಂಗಿಕ ಕಿರುಕುಳ ಅಲ್ಲ. ಇಬ್ಬರಿಗೂ ಒಪ್ಪಿಗೆಯಿದ್ದರೆ ಅದು ಅತ್ಯಾಚಾರವಾಗಲ್ಲ ಎಂದು ಹೇಳಿದರು.

ಈ ಬಗ್ಗೆ ಸಮಗ್ರ ತನಿಖೆ ಆಗಬೇಕು, ಮೊದಲು ದಿನೇಶ್ ಕಲ್ಲಹಳ್ಳಿ ಅವರನ್ನು ಬಂಧಿಸಬೇಕು. ಇದು ಬ್ಲ್ಯಾಕ್ ಮೇಲ್ ಅನ್ನೋದು ಗೊತ್ತಾಗಲ್ವಾ? ಎಂದು ಕಿಡಿಕಾರಿದರು.