ಆರ್.ಆರ್. ನಗರ ಉಪಚುನಾವಣೆ : ಮುನಿರತ್ನ ಪರ ಧರ್ಶನ್ ಹಾಗೂ ಅಮೂಲ್ಯರಿಂದ ಭರ್ಜರಿ ಪ್ರಚಾರ…

142
firstsuddi

ಬೆಂಗಳೂರು : ಆರ್.ಆರ್. ನಗರದ ವಿಧಾನಸಭೆ ಉಪಚುನಾವಣೆಯ ಪ್ರಚಾರ ಅಬ್ಬರದಿಂದ ಸಾಗುತ್ತಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಟಿ ಅಮೂಲ್ಯ ಜಗದೀಶ್ ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡಲು ಆಗಮಿಸಿದ ನಟರನ್ನು ನೋಡಲು ಅಭಿಮಾನಿಗಳು ಭಾರಿ ಪ್ರಮಾಣದಲ್ಲಿ ಜಮಾಯಿಸಿದ್ದು, ಅಭಿಮಾನಿಗಳತ್ತ ಕೈಬೀಸಿ ದರ್ಶನ್ ಹಾಗೂ ಅಮೂಲ್ಯ ಅವರು ಭರ್ಜರಿ ಮತಬೇಟೆ ನಡೆಸಿದರು. ರ್ಯಾಲಿ ನಡುವೆ ಮಹಿಳೆಯರು ದರ್ಶನ್ ಅವರಿಗೆ ಆರತಿ ಬೆಳಗಿ ಸಂಭ್ರಮಿಸಿದರು.