ಉಡುಪಿ: ವಿದ್ಯುತ್ ಶಾಕ್ ನಿಂದಾಗಿ ಬಾಲಕ ಸಾವು

142
firstsuddi

ಉಡುಪಿ: ಬಾವಿಯ ಪಂಪ್ ಸೆಟ್ಟನ್ನು ಮೇಲಕ್ಕೆತ್ತುವ ವೇಳೆ ವಿದ್ಯುತ್ ಅಫಘಾತದಿಂದಾಗಿ 15 ವರ್ಷ ವಯಸ್ಸಿನ ಬಾಲಕ ಸಾವನಪ್ಪಿದ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯ ಲಕ್ಷ್ಮೀನಗರದಲ್ಲಿ ನಡೆದಿದೆ. ಮೃತ ಬಾಲಕನನ್ನು ಲಕ್ಷ್ಮೀನಗರ ನಿವಾಸಿ ಗೌತಮ್ (15) ಎಂದು ಗುರುತಿಸಲಾಗಿದೆ. ಮಾಹಿತಿಗಳ ಪ್ರಕಾರ ಗೌತಮ್ ತನ್ನ ನೆರೆಮನೆಯವರ ಬಾವಿಯಲ್ಲಿ ಹಾಕಿರುವ ಪಂಪ್ ಸೆಟ್ಟನ್ನು ಎತ್ತಲು ನೆರೆಮನೆಯವರಿಗೆ ಸಹಾಯ ಮಾಡಲು ತೆರಳಿದ್ದು ಈ ವೇಳೆ ವಿದ್ಯುತ್ ಪ್ರವಹಿಸಿ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.  ಇದೆ ಸಮಯದಲ್ಲಿ ಮಳೆಯೂ ಬರುತ್ತಿದ್ದು ಸಿಡಿಲು ಕೂಡ ಇತ್ತು ಎನ್ನಲಾಗಿದೆ. ಈ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.