ಎರಡು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸಾರ್ಜ್ ಆದ ರಾಘವೇಂದ್ರ ರಾಜಕುಮಾರ್.

151
First Suddi

ಬೆಂಗಳೂರು : ಬೆಳಕು ಚಿತ್ರದ ಶೂಟಿಂಗ್ ವೇಳೆ ರಾಘವೇಂದ್ರ ರಾಜಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ರಾಜಾಜಿನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿ ಕಳೆದ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಇದೀಗ ರಾಘವೇಂದ್ರ ರಾಜಕುಮಾರ್ ಅವರ ಆರೋಗ್ಯ ಸುಧಾರಿಸಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಾತನಾಡಿದ ಅವರು ನಾನು ಶೂಟಿಂಗ್ನಲ್ಲಿದ್ದೆ, ಸಡನ್ ಆಗಿ ಹುಶಾರಿಲ್ಲದ ಹಾಗಾಯ್ತು, ತಕ್ಷಣ ಆಸ್ಪತ್ರೆಗೆ ದಾಖಲಾದೆ. ಈಗ ಭಯಪಡುವಂತಹದ್ದು ಏನೂ ಇಲ್ಲ, ಒಂದು ವಾರ ಮನೆಯಲ್ಲಿ ವಿಶ್ರಾಂತಿ ಪಡೆದರೆ ಸರಿಹೋಗುತ್ತೆ. ಒಂದು ವಾರದ ನಂತರ ಮತ್ತೆ ಶೂಟಿಂಗ್‍ಗೆ ಹೋಗುತ್ತೇನೆ ಎಂದರು.