ಎರಡು ವರ್ಷದಿಂದ ಕೊರೊನಾ ನಮ್ಮ ಜೊತೆಯೇ ಇದೆ : ಶೋಭಾ ಕರಂದ್ಲಾಜೆ.

135
firstsuddi

ಚಿಕ್ಕಮಗಳೂರು : ಎರಡು ವರ್ಷದಿಂದ ಕೊರೊನಾ ನಮ್ಮ ಜೊತೆಯೇ ಇದೆ. ಕೊರೊನಾ ಮಧ್ಯೆಯೇ ಕೆಲವು ತಿಂಗಳು ನಾವೆಲ್ಲಾ ಬದುಕಬೇಕಾಗಿದೆ. ಕರ್ಫ್ಯೂ ಮಾಡಿ ಜನರ ಜೀವನಕ್ಕೆ ತೊಂದರೆ ಕೊಡುವುದು ಸರಿಯಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ, ಆರೋಗ್ಯ ಇಲಾಖೆ, ತಜ್ಞರ ಅಭಿಪ್ರಾಯ ಪಡೆದು ನಿರ್ಧಾರ ಮಾಡಬೇಕು. ಲಾಕ್‍ಡೌನ್‍ನಿಂದ ಆರ್ಥಿಕವಾಗಿ ಹಿನ್ನೆಡೆಯಾಗ್ತಿದೆ ಅನ್ನೋದು ಜನರ ಭಾವನೆ. ಸರ್ಕಾರ ಕರ್ಫ್ಯೂವನ್ನ ವಿಥ್ ಡ್ರಾ ಮಾಡಬೇಕು. ಜನ ಶಿಸ್ತನ್ನ ಫಾಲೋ ಮಾಡಿದರೆ ಲಾಕ್ ಡೌನ್, ಕರ್ಫ್ಯೂ ಅಗತ್ಯವಿಲ್ಲ. ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಕಾಪಾಡಲು ಕ್ರಮವನ್ನು ಕೈಗೊಳ್ಳಲಿ ಎಂದು ಸಲಹೆ ನೀಡಿದ್ದಾರೆ.