ಏನಿಲ್ಲಾ ಏನಿಲ್ಲಾ.. ಸಿದ್ದರಾಮಯ್ಯ ಬಜೆಟ್​ನಲ್ಲಿ ಏನಿಲ್ಲ: ವಿಧಾನಸೌಧದ ಮುಂದೆ ಬಿಜೆಪಿ ನಾಯಕರ ಪ್ರತಿಭಟನೆ…

59
firstsuddi

ಬೆಂಗಳೂರು: ಏನಿಲ್ಲಾ.. ಏನಿಲ್ಲಾ… ಸಿದ್ದರಾಮಯ್ಯ ಬಜೆಟ್​ನಲ್ಲಿ ಏನಿಲ್ಲ.., ಓಳು ಬರಿ ಓಳು ಎಂದು ಹಾಡು ಹೇಳುವ ಮೂಲಕ ವಿಧಾನಸೌಧದ ಮುಂಭಾಗದಲ್ಲಿರುವ ಕೆಂಗಲ್ ಪ್ರತಿಮೆ ಬಳಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಪ್ರತಿಭಟನೆ ನಡೆಸುತ್ತಿದೆ.

ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಬಜೆಟ್ ನ್ನು ವಿಧಾನಸಭೆಯಲ್ಲಿ ಮಂಡಿಸಲು ಆರಂಭಿಸಿದ ಕೆಲವೇ ಹೊತ್ತಿನಲ್ಲಿ ವಿರೋಧ ಪಕ್ಷದ ನಾಯಕರು ಸದನದಲ್ಲಿ ಗಲಾಟೆ, ಗದ್ದಲ ಆರಂಭಿಸಿದರು.

ವಿಧಾನಸಭೆ ಪ್ರವೇಶದ್ವಾರದಲ್ಲಿ ವಿಪಕ್ಷ ಬಿಜೆಪಿ ಜೆಡಿಎಸ್ ಪ್ರತಿಭಟನೆ ನಡೆಸುತ್ತಿದ್ದು, ಏನಿಲ್ಲಾ ಏನಿಲ್ಲಾ ಸಿದ್ದರಾಮಯ್ಯ ಬಜೆಟ್​ನಲ್ಲಿ ಏನಿಲ್ಲ, ಓಳು ಓಳು ಬಜೆಟ್ ಬರೀ ಓಳು ಎಂದು ಘೋಷಣೆಗಳನ್ನು ಕೂಗಲಾಗುತ್ತಿದೆ. ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಭಾಗಿಯಾಗಿದ್ದಾರೆ.

ಈ ವೇಳೆ ಮಾತನಾಡಿದ ಆರ್. ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ್ದಾರೆ. ನಾವು ಎಲ್ಲರೂ ಸಿಎಂ ಸಿದ್ದರಾಮಯ್ಯ ಜನರ ಅಭಿವೃದ್ಧಿ ಪರ ಬಜೆಟ್ ಮಂಡಿಸಿತ್ತಾರೆ ಅಂದುಕೊಂಡಿದ್ವಿ. ಆದ್ರೆ ಕಾಂಗ್ರೆಸ್ ಶಾಲು ಹಾಕಿಕೊಂಡು ಬಂದಿದ್ದಾರೆ. ಕೇಂದ್ರ ಸರ್ಕಾರವನ್ನು ಪದೇ ಪದೇ ತೆಗಳುವ ಕೆಲಸ ಮಾಡ್ತಾ ಇದ್ರು. ಒಮ್ಮೆ ಸುಮ್ಮನೆ ಇರ್ತಾ ಇದ್ವಿ. ಆದ್ರೆ ಪದೇ ಪದೇ ಕೇಂದ್ರ ಸರ್ಕಾರ ಟೀಕೆ ಮಾಡ್ತಾ ಇದ್ದೀರಾ. ಆಡಳಿತ ಮಾಡೋಕೆ ಆಗಲ್ಲ ಅಂದ್ರೆ ಕೆಳಕ್ಕೆ ಇಳಿಯಿರಿ. ದೇಶದಲ್ಲಿ ಎಲ್ಲ ರಾಜ್ಯಗಳು ತೆರಿಗೆ ಪಾವತಿ ಮಾಡಿದ್ದಾರೆ. ಸಿಎಂ ಅವರನ್ನು ವಿರೋಧಿಸಿ ನಾವು ಸಭಾತ್ಯಾಗ ಮಾಡಿದ್ದಾರೆ. ನಾವು ಪ್ರತಿಭಟನೆ ಮಾಡಿರುವುದು ವಿಡಿಯೋ ಕೊಡದೆ ಸ್ಪೀಕರ್ ಘೋರ ಅನ್ಯಾಯ ಮಾಡಿದ್ದಾರೆ. ಸ್ಪೀಕರ್ ಅವರು ಕೆಟ್ಟ ಪರಂಪರೆಯ ಮಾಡಿರುವುದು ಒಳ್ಳೆಯದಲ್ಲ ಎಂದರು.

ಇನ್ನು, ಸಿಎಂ ಸಿದ್ದರಾಮಯ್ಯ ಅವರಿಗೆ ನೋಬಲ್ ಪ್ರಶಸ್ತಿ ಕೊಡಬೇಕು. ಸಿದ್ದರಾಮಯ್ಯ 1 ಲಕ್ಷ ಕೋಟಿ ರೂಪಾಯಿ ಸಾಲದ ಹೊರೆ ಹಾಕಿದ್ದಾರೆ. ಸಾಲವನ್ನು 1 ಲಕ್ಷ ಕೋಟಿ ದಾಟಿಸಿದ ಕೀರ್ತಿ ಸಿದ್ದರಾಮಯ್ಯಗೆ ಸೇರುತ್ತೆ. ಇಡೀ ಬಜೆಟ್​ನಲ್ಲಿ ನೇಕಾರರ ಹೆಸರಿಲ್ಲ. ರೈತರಿಗೆ ಏನು ಮಾಡಿಲ್ಲ, ಬೆಂಗಳೂರಿಗೆ ಶೂನ್ಯ. ಸುರಂಗ ಮಾರ್ಗ ಮಾಡೋಕೆ ಹೋಗಿದ್ದಾರೆ. ಲೂಟಿ ಮಾಡೋಕೆ ಸುರಂಗ ಮಾರ್ಗ ಮಾಡ್ತಾರೆ. ಈ ಬಜೆಟ್ ಉಪ್ಪು ಉಳಿ ಇಲ್ಲ. ಇದು ಬೋಗಸ್ ಬಜೆಟ್. ನರೇಂದ್ರ ಮೋದಿ ನಿಂದಿಸಲು ಬಳಸಿಕೊಂಡಿದ್ದಾರೆ. ರೈತರಿಗೆ ದ್ರೋಹ ಮಾಡಿರುವ ಬಜೆಟ್ ಎಂದು ಆಕ್ರೋಶ ಹೊರಹಾಕಿದರು.